ಮತ್ತೆ ಕಾಡಾನೆ ದಾಳಿ, ವ್ಯಾಪಕ ಕೃಷಿ ನಾಶ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಮುಳ್ಳೇರಿಯ ಬಳಿಯ ಕೊಟ್ಟಂಗುಳಿ, ಕೊಳತ್ತಿಂಗಾಲ್ ಮೊದಲಾದ ಪ್ರದೇಶಗಳಿಗೆ ತಡರಾತ್ರಿ ನುಗ್ಗಿದ ಕಾಡಾನೆ ಹಿಂಡು ಕೃಷ್ಣನ್ ನಾಯರ್, ಮಾಧವನ್ ನಾಯರ್, ರಾಘವನ್ ಮೊದಲಾದವರ ಕೃಷಿ ನಾಶಗೊಳಿಸಿದೆ. ಹಿಂಡಿನಲ್ಲಿ ಆರು ಕಾಡಾನೆಗಳಿದ್ದವು ಎಂದುತಿಳಿದು ಬಂದಿದೆ.

ಅರಣ್ಯಾಧಿಕಾರಿಗಳು ಹಾಗೂ ಆದೂರು ಸಿ ಐ ನೇತೃತ್ವದ ಪೆÇೀಲೀಸರು ಸ್ಥಳಕ್ಕೆ ತೆರಳಿ ಹುಡುಕಾಟ ನಡೆಸಿದ್ದು, ಆನೆಗಳು ಕಂಡುಬಂದಿಲ್ಲ. ಹಗಲು ಹೊತ್ತು ಕಾಡೊಳಗೆ ಸೇರಿಕೊಳ್ಳುವ ಆನೆಗಳ ಹಿಂಡು ರಾತ್ರಿಯಾಗುತ್ತಿರುವಂತೆ ನಾಡೊಳಗೆ ನುಗ್ಗುತ್ತಿರುವುದು ಸಮಸ್ಯೆಯಾಗಿದೆ. ಈ ನಡುವೆ ಅರುವಂಗಾಲ್ ವಿಷ್ಣು ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ನ 40 ರಷ್ಟು ಕಾರ್ಯಕರ್ತರು ಆನೆ ಆಗಮಿಸುವ ಹಾದಿಯಲ್ಲಿ ಬೆಂಕಿಗಳನ್ನು ಹಾಕಿ ಓಡಿಸಲೆತ್ನಿಸಿದರೂ ಪ್ರಯೋಜನವಾಗಿಲ್ಲ.

ಆನೆಗಳ ಕೃಷಿ ಪ್ರದೇಶಗಳಿಗೆ ಲಗ್ಗೆ ಇಡುವುದನ್ನು ತಡೆಯಲು ಕಲ್ಲಿನ ಭದ್ರ ತಡೆಗೋಡೆಯನ್ನು ನಿರ್ಮಿಸಲಾಗುತ್ತಿದೆ ಎಂದು ಅರಣ್ಯಾಧಿಕಾರಿ ಪ್ರೇಮರಾಜನ್ ತಿಳಿಸಿದ್ದಾರೆ. ತಲಪಚ್ಚೇರಿಯಲ್ಲಿ 2.2 ಮೀಟರ್ ಎತ್ತರವಿರುವ ತಡೆಗೋಡೆಯನ್ನು ರೂ 1.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ, ಶೇ 98 ಕಾಮಗಾರಿಯು ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.