`ನಕಲಿ ಇಂಜಿನಿಯರ್’ ಪತಿ ವಿರುದ್ಧ ಪತ್ನಿಯ ಕಾನೂನು ಹೋರಾಟ

ಸಾಂದರ್ಭಿಕ ಚಿತ್ರ

ಬೆಂಗಳೂರು : ತಾನೊಬ್ಬ ಇಂಜಿನಿಯರ್ ಎಂದು ಮದುವೆಗೆ ಮುಂಚೆ ಸುಳ್ಳು ಹೇಳಿ  ತನ್ನನ್ನು ಮೋಸ ಮಾಡಿದ ಪತಿಯ ಹಾಗೂ ಆತನ ಇಬ್ಬರು ಸಂಬಂಧಿಕರ ವಿರುದ್ಧ ಮಹಿಳೆಯೊಬ್ಬಳು ನ್ಯಾಯಾಲಯದ ಮೊರೆ ಹೋಗಿದ್ದರೆ, ಇತ್ತೀಚೆಗೆ ಆರೋಪಿ ಪತಿ ತನ್ನ ವಿರುದ್ಧದ ಪ್ರಕರಣವನ್ನು ವಜಾಗೊಳಿಸುವಂತೆ ಕೋರಿ ಸಲ್ಲಿಸಿದ ಅಪೀಲನ್ನು ನ್ಯಾಯಾಲಯ ತಿರಸ್ಕರಿಸಿದೆ. 2008ರಲ್ಲಿ ಆತನ ಪತ್ನಿ ಆತನ ವಿರುದ್ಧ ದಾಖಲಿಸಿದ್ದ ಪ್ರಕರಣದ ಶೀಘ್ರ ವಿಚಾರಣೆ ನಡೆಸಿ ಆರು ತಿಂಗಳೊಳಗೆ ಇತ್ಯರ್ಥಗೊಳಿಸುವಂತೆಯೂ ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಲಾಗಿದೆ. ಮಹಿಳೆ ತನ್ನ ದೂರಿನಲ್ಲಿ ತನ್ನನ್ನು ಮದುವೆಯಾಗುವವ ಇಂಜಿನಿಯರ್ ಅಲ್ಲ ಎಂದು ತಿಳಿದಿದ್ದರೆ ಆತನನ್ನು ಮದುವೆಯಾಗುತ್ತಿರಲಿಲ್ಲ ಎಂದು ಹೇಳಿದ್ದಳಲ್ಲದೆ ಆತನ ಸಂಬಂಧಿಕರೂ ಹಲವು ಸತ್ಯಗಳನ್ನು ಮರೆಮಾಚಿ ತನ್ನ ಕುಟುಂಬದಿಂದ ಕಾರು, ಹಣ ಹಾಗೂ ಒಡವೆಗಳನ್ನು ಪಡೆದಿದ್ದರು ಎಂದು ಆರೋಪಿಸಿದ್ದಳು.