ಪ್ರಜ್ವಲ್ ಪತ್ನಿ ರಾಗಿಣಿ ಸಿನಿರಂಗಕ್ಕೆ

ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ಈಗ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾಳೆ. ರಾಗಿಣಿಗೆ ಬಣ್ಣದ ಲೋಕವೇನೂ ಹೊಸದಲ್ಲ. ಆಕೆ ಹಲವಾರು ಜಾಹೀರಾತುಗಳಿಗೆ ರೂಪದರ್ಶಿಯಾಗಿದ್ದವಳು. ಈಗ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾಳೆ.

ಇದೊಂದು ಕಿರುಚಿತ್ರವಾಗಿದೆ. `ರಿಶಭಪ್ರಿಯ’ ಎನ್ನುವ ಈ ಸಿನಿಮಾದಲ್ಲಿ ರಚಿತಾರಾಮ್ ಕೂಡಾ ರಾಗಿಣಿ ಜೊತೆ ತೆರೆಹಂಚಿಕೊಂಡಿದ್ದಾಳೆ. ಆರ್ ಜೆ ಮಯೂರ ರಾಘವೇಂದ್ರ ಈ ಸಿನಿಮಾದ ನಿರ್ದೇಶಕ. `ನಾನು ಹೊಸತನ್ನೇನಾದರೂ ಪ್ರಯತ್ನಿಸಬೇಕೆಂದಿರುವಾಗ ಈ ಪ್ರಾಜೆಕ್ಟ್ ಸಿಕ್ಕಿದೆ. ಇದು ಇಂಟರೆಸ್ಟಿಂಗ್ ಆಗಿರುವುದರಿಂದ ಇದರಲ್ಲಿ ನಟಿಸಲು ಉತ್ಸುಕಳಾಗಿದ್ದೇನೆ. ಮುಂದೇನಾಗುತ್ತೋ ನೋಡೋಣ’ ಎನ್ನುತ್ತಾಳೆ ರಾಗಿಣಿ.