ಕೊಲ್ಲಿ ಉದ್ಯೋಗಿಯ ಪತ್ನಿ ಇಬ್ಬರು ಮಕ್ಕಳೊಂದಿಗೆ ನಾಪತ್ತೆ

ಸಾಂದರ್ಭಿಕ ಚಿತ್ರ

ಮಂಜೇಶ್ವರ : ಕೊಲ್ಲಿ ಉದ್ಯೋಗಿಯೊಬ್ಬರ ಪತ್ನಿ ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿರುವುದಾಗಿ ಯುವತಿಯ ತಾಯಿ ಮಂಜೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೊಲ್ಲಿ ಉದ್ಯೋಗಿ ಉದ್ಯಾವರ ಮಾಡ ಪರಿಸರ ನಿವಾಸಿ ಅಬೂಬಕ್ಕರ್ (ಈಸಾ) ಎಂಬವರ ಪತ್ನಿ ಫೌಝಿಯಾ (29) ಮಕ್ಕಳಾದ ಮೊಹಮ್ಮದ್ ಸೆಬೀಲ್ (9) ಹಾಗೂ ಮೊಹಮ್ಮದ್ ನೆಬೀಲ್ (7) ನಾಪತ್ತೆಯಾಗಿರುವುದಾಗಿ ದೂರಲಾಗಿದೆ.

ಮನೆಯಿಂದ ನಾನು ಹೊರಡುತ್ತೇನೆ, ನನ್ನನ್ನು ಹುಡುಕಬೇಡಿ ಎಂಬ ಸಂದೇಶವನ್ನು ತಾಯಿಗೆ ನೀಡಿರುವುದಾಗಿ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಮಗಳನ್ನು ಹುಡುಕಿಕೊಂಡು ಉಡುಪಿಯಿಂದ ಆಗಮಿಸಿದ ತಾಯಿ ಹಲವೆಡೆ ಹುಡುಕಾಡಿಯೂ ಪತ್ತೆಯಾಗದ ಹಿನ್ನೆಲೆಯಲ್ಲಿ ಮಂಜೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೆÇಲೀಸರು ಶೋಧ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

 

LEAVE A REPLY