ಹೆಂಡತಿಗೆ ರಾಡಿನಿಂದ ಹಲ್ಲೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಹೆಂಡತಿಗೆ ಹಾಗೂ ಆಕೆಯ ಸಂಬಂಧಿಕರಿಗೆ ಗಂಡ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಬ್ರಹ್ಮಾವರ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ. ಬ್ರಹ್ಮಾವರ ಸಮೀಪದ ಚೇರ್ಕಾಡಿ ಜಾರ್ಜೇಡ್ಡು ಪೇತ್ರಿ ನಿವಾಸಿ ಸಂಧ್ಯಾಲಕ್ಷ್ಮೀ(23)ಗೆ ಆರೋಪಿ ಗಂಡ ಮಹೇಶ್ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿದ್ದಲ್ಲದೇ, ಬಿಡಿಸಲು ಬಂದ ಅತ್ತೆ, ಅಜ್ಜಿ ಹಾಗೂ ಅಜ್ಜಗೆ ಹಲ್ಲೆ ನಡೆಸಿದ್ದಾನೆ ಎಂದು ದೂರಲಾಗಿದೆ. ಈ ಬಗ್ಗೆ ಆರೋಪಿ ಗಂಡ ಮಹೇಶ್ ವಿರುದ್ಧ ಬ್ರಹ್ಮಾವರ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿ ಪ್ರತಿದೂರು ಕೂಡ ದಾಖಲಾಗಿದೆ. ಕುಂದಾಪುರ ತಾಲೂಕು ಬೇಳೂರು ಗ್ರಾಮ ಕೊಳ್ಕೆಬೈಲು ನಿವಾಸಿ ನಂದಿ ಎಂಬಾಕೆಯ ಮಗ ಮಹೇಶ್ 4 ವರ್ಷದ ಹಿಂದೆ ಸಂಧ್ಯಾಳನ್ನು ಮದುವೆಯಾಗಿದ್ದಾರೆ. ಬಳಿಕ ಮಹೇಶ್ ಮೇಲೆ ಹೆಂಡತಿ ಸಂಧ್ಯಾ ಹಾಗೂ ಆಕೆಯ ಸಂಬಂಧಿಕರಾದ ರಾಮ, ಮುತ್ತು, ಮಂಜುನಾಥ ಮತ್ತು ಸುಶ್ಮಿತಾ ಇವರು ಸೇರಿ ಮಾನಸಿಕ ಹಿಂಸೆ ನೀಡಿ ಮಹೇಶನ ಜೀವಕ್ಕೆ ತೊಂದರೆಯಾಗುವಂತೆ ಮಾಡಿದ್ದಾರೆ ಎಂದು ದೂರಲಾಗಿದೆ.