ಪಿ ಎಫ್ ಐ ಸಂಘಟನೆಯ ಹಿಂಸಾತ್ಮಕ ಚಟುವಟಿಕೆಯನ್ನು ನಿಯಂತ್ರಿಸಬಾರದೇ

ಮಂಗಳೂರು ನಗರದ ಕಮೀಶನರ್ ಮತ್ತು ಪೊಲೀಸರ ವಿರುದ್ಧ ಪಿ ಎಫ್ ಐ ಎಂಬ ಸಂಘಟನೆಯ ಸದಸ್ಯರು ಅಪ್ರಜಾತಾಂತ್ರಿಕ ರೀತಿಯಲ್ಲಿ ಕಾನೂನಿಗೆ ವಿರುದ್ಧ ವಾಗಿ ಪ್ರತಿಭಟಿಸಿದರು. ಪೊಲೀಸರಿಗೆ ಕಲ್ಲೆಸೆಯುವ ಅಗತ್ಯ ಅವರಿಗೇನಿತ್ತು ? ಅವರು ಕಾನೂನು ಕೈಗೆ ತೆಗೆದುಕೊಳ್ಳವುವವರೆಂಬುದಕ್ಕೆ ಹಲವು ದಾಖಲೆಗಳು ಇವೆ. ಯಾವುದೇ ಪೂರ್ವಾನುಮತಿ ಪಡೆಯದೆ ನಗರದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಪ್ರತಿಭಟಿಸಿದುದು ಖಂಡನೀಯ. ಪೊಲೀಸರು ಪ್ರತಿಭಟನಾಕಾರರನ್ನು ಹಿಮ್ಮೆಟ್ಟಿಸಿರುವವರನ್ನು ಪೊಲೀಸರು ದಸ್ತಗಿರಿ ಮಾಡುವಂತಿಲ್ಲವೇ ? ಕಾಂಗ್ರೆಸ್ ಆಡಳಿತವಿರುವ ಕರ್ನಾಟಕ ರಾಜ್ಯದಲ್ಲಿ ಗರಿಷ್ಠ ಅಪರಾಧ ಎಸಗುವವರು ಯಾರೆಂಬುದು ಎಲ್ಲರಿಗೂ ತಿಳಿದಿದೆ. ಕೇರಳದಲ್ಲಿ ಕ್ರೈಸ್ತ ಪ್ರಾಧ್ಯಾಪಕರ ಕೈ ಕಡಿದವರು, ಕರಾವಳಿ ಅಲೆಯ ವಿಟ್ಲ ವರದಿಗಾರನಿಗೆ ಮಾರಣಾಂತಿಕ ಹಲ್ಲೆ ನಡೆಸಿದವರು ಯಾರು   ಕೇರಳವನ್ನು ಇಸ್ಲಾಮೀಕರಣ ಮಾಡಹೊರಟವರೆಂದು ಅಲ್ಲಿನ ಸರಕಾರ ಹೈಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಿ ಸಂಘಟನೆಯನ್ನು ನಿಷೇಧಿಸಲು ಮುಂದಾಗಿದ್ದು ಸುಳ್ಳೇ
ಅಪರಾಧಿಗಳನ್ನು ಬಂಧಿಸಲು, ಕಾನೂನುಕ್ರಮ ಕೈಗೊಳ್ಳಲು ಕಾಂಗ್ರೆಸ್ ಸಚಿವರು, ಶಾಸಕರು ಬಿಡುತ್ತಿಲ್ಲವೆನ್ನಲಾಗುತ್ತಿದೆ. ಹೀಗಿದ್ದರೂ ಕಾನೂನು ಜಾರಿಗೊಳಿಸುವ ಪೊಲೀಸರ ವಿರುದ್ಧ ಕತ್ತಿ ಮಸೆಯುವ ಸಂಘಟನೆಗಳನ್ನು ನಿರ್ಬಂಧಿಸುವುದು ಸೂಕ್ತವಾಗಿದೆ. ಪೊಲೀಸರನ್ನು ಗುರಿಯಾಗಿಸಿ ಮಾರಣಾಂತಿಕ ಹಲ್ಲೆ ನಡೆಸುವವರನ್ನು ತಕ್ಷಣ ಬಂಧಿಸುವುದು ಪೊಲೀಸ್ ಇಲಾಖೆಯ ಮಹತ್ವದ ಹೊಣೆಯಾಗಿದೆ. ಆದರೆ ಕರಾವಳಿಯ ಸಚಿವರು, ಶಾಸಕರು `ವೋಟ್ ಬ್ಯಾಂಕ್’ಗಾಗಿ ಅಲ್ಪಸಂಖ್ಯಾತರನ್ನು ಒಲೈಸಲು ಪೊಲೀಸ್ ಅಧಿಕಾರಿಗಳಿಗೆ `ಅವರನ್ನು ಬಿಟ್ಟು ಬಿಡಿ. ನಮ್ಮ ಕಾರ್ಯಕರ್ತರು’ ಎಂದು ಧಮ್ಕಿ ಹಾಕುವುದನ್ನು ವಿದ್ಯಾವಂತ ತುಳುನಾಡಿನ ಜನತೆ ಸಹಿಸಲಾರರು. ಪೊಲೀಸರ ಭಯ ಬೇಕಲ್ಲವೇ
ಇದೇ ಉಸ್ತುವಾರಿ ಸಚಿವರು `ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವುದನ್ನು ಬಂಧಿಸಿ, ಬಳ್ಳಾರಿಗೆ ಕಳುಹಿಸಿ’ ಎಂದು ಆರ್ಭಟಿಸುತ್ತಿದ್ದರು. ಈಗ ಪೊಲೀಸ್ ಠಾಣೆಗೆ  ಕಚೇರಿಗೆ ಮುತ್ತಿಗೆ ಹಾಕಿರುವವರು ಸಚಿವರ ಹಿಂಬಾಲಕರಲ್ಲವೇ   ಹಲ್ಲೆ, ಹತ್ಯೆ ಮಾದಕ ದ್ರವ್ಯ ಮಾರಾಟ ಅಕ್ರಮ ಮರಳು ಸಾಗಾಟ, ಕಳ್ಳತನ, ವಂಚನೆ, ಅಪಹರಣ, ಅಕ್ರಮ ಗೋವು ಸಾಗಾಣಿಕೆ ಮುಂತಾದ ಅಪರಾಧಗಳಲ್ಲಿ ಆರೋಪಿಗಳ್ಯಾರು ಎಂಬುದನ್ನು ಕಾಂಗ್ರೆಸ್ಸಿನ ಸಚಿವ, ಶಾಸಕರು ಕಣ್ತೆರೆದುನೋಡಲಿ.
ಪೊಲೀಸರು ರಾಜಕಾರಣಿಗಳ, ಸಚಿವರ, ಶಾಸಕರ ಕೈಗೊಂಬೆ ಆಗಲೂಬಾರದು. ನಿಷ್ಪಕ್ಷಪಾತವಾಗಿ ಸಾಮಾಜಿಕ ನ್ಯಾಯ ಸ್ಥಿರವಾಗಿರಲು ಪೊಲೀಸ್ ಅಧಿಕಾರಿಗಳು ಎಚ್ಚೆತ್ತೇಳಬೇಕು. ನಾಗರಿಕರು ಶಾಂತಿ, ಸೌಹಾರ್ದತೆ, ಸುರಕ್ಷಿತತೆ ಬಯಸುತ್ತಾರೆ

  • ಪ್ರಜ್ಞಾ ಕೆ  ಮಂಗಳೂರು