ಕಾಂಗ್ರೆಸ್ ಪಕ್ಷದ ನಾಯಕರ ಬಗ್ಗೆ ಇಲ್ಲಸಲ್ಲದ ಆರೋಪ ಯಾಕೆ

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಲಾಠಿಚಾರ್ಜ್ ಪ್ರಕರಣದ ಕುರಿತು ಮುಸ್ಲಿಂ ನಾಯಕರ ಸಭೆಯಲ್ಲಿ ಕಾಂಗ್ರೆಸ್ ನಾಯಕರಾದ ರಮಾನಾಥ ರೈ, ಮಿಥುನ್ ರೈ ಇತರರ ಬಗ್ಗೆ ಇಲ್ಲಸಲ್ಲದ ಮಾತನಾಡಿರುವುದು ಖಂಡನೀಯ.
ಸಂಘಟನೆಗೆ ಸೇರಿದ ಕೆಲವರು “ಕಾಂಗ್ರೆಸ್ ನಾಯಕರು ಅನ್ಯಾಯ ಮಾಡಿದ್ದಾರೆ” ಎಂದು ಹೇಳಿಕೊಳ್ಳುವ ಇವರು ಈ ಬಗ್ಗೆ ಸತ್ಯ ವಿಚಾg ತಿಳಿದುಕೊಳ್ಳುವುದು ಉತ್ತಮ. ಇದೇ ಸಂಘಟನೆಯವರು ಪರಿವಾರ ನಾಯಕರಿಂದ ಬೇಕಾದಷ್ಟು ಹಣ ಪೀಕಿಸಿ ಇತ್ತೀಚಿನ ವರ್ಷಗಳಿಂದ ಜಿಲ್ಲೆಯಲ್ಲಿ ನಡೆದಿರುವ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಿ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿರುವುದು ಎಲ್ಲರಿಗೂ ತಿಳಿದ ಸಂಗತಿ
ಹಣದ ಆಸೆಗಾಗಿ ಬಿಜೆಪಿ ಮಂದಿ ಕೈ ಹಿಡಿಯುವವರು ಅನ್ಯಾಯವಾದಾಗ ಕಾಂಗ್ರೆಸ್ ನಾಯಕರ ಕೈ ಹಿಡಿಯುವುದ್ಯಾಕೆ  ಆಗ ಬಿಜೆಪಿಯವರಿಲ್ಲವೇ  ಈಗ ಅದೇ ಕೋಮುವಾದಿ ಪಕ್ಷದವರು ಮೊನ್ನೆ ಮಂಗಳೂರಿನಲ್ಲಿ ನಡೆದ ಲಾಠಿಚಾರ್ಜ್ ಸಂದರ್ಭ ನಿಮ್ಮ ಸಂಘಟನೆ ನಿಷೇಧ ಮಾಡಲು ಟೊಂಕಕಟ್ಟಿ ನಿಂತಿರುವುದು ತಿಳಿಯದೇ ಹೋಯಿತೇ  ಆದ್ದರಿಂದ ಇನ್ನಾದರೂ ಕಾಂಗ್ರೆಸ್ ನಾಯಕರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಇನ್ನಾದರೂ ನಿಲ್ಲಿಸಲಿ

  • ಅಬ್ದುಲ್ ಹಮೀದ್, ಮಂಗಳೂರು