ಸಮಾಜದ ಅನ್ಯಾಯ ಪ್ರಶ್ನಿಸುವವರನ್ನೇ ಗುಂಡಿಕ್ಕಿ ಸಾಯಿಸಿದರೆ ಹೇಗಪ್ಪ

ಪತ್ರಕರ್ತೆ ಸಾಹಿತಿ ವಿಚಾರವಾದಿ ಗೌರಿ ಲಂಕೇಶರನ್ನು ಗುಂಡಿಕ್ಕಿ ಹತ್ಯೆ ಮಾಡಿ 48 ಗಂಟೆಗಳು ಕಳೆಯುವುದರೊಳಗೆ ಅಸ್ಸಾಂನಲ್ಲಿ ಮತ್ತೊಬ್ಬ ಪತ್ರಕರ್ತನನ್ನು ಗುಂಡಿಕ್ಕಿ ಸಾಯಿಸಿದ್ದಾರೆ ಈ ಹಿಂದೆ ಇದೇ ರೀತಿ ಮಹಾರಾಷ್ಟ್ರದ ಚಿಂತಕರಾದ ದಾಬೋಲ್ಕರ್ ಪನ್ಸಾರೆ ಎಂ ಎಂ ಕಲಬುರ್ಗಿ ಅವರನ್ನು ಕೊಲೆ ಮಾಡಲಾಗಿತ್ತು ಮೊನ್ನೆ ಗೌರಿ ಲಂಕೇಶ್ ನಿನ್ನೆ ಬಿಹಾರದ ಪಂಕಜ್ ಮಿಶ್ರ ನಾಳೆ ಯಾರು ಹೀಗೆ ಸಮಾಜದ ಅಂಕುಡೊಂಕು ತಿದ್ದುವವರನ್ನು ಅನ್ಯಾಯ ಪ್ರಶ್ನಿಸುವವರನ್ನು ಗುಂಡಿಕ್ಕಿ ಕೊಲ್ಲುತ್ತಿದ್ದರೆ ನಾವು ಈ ಸಮಾಜದಲ್ಲಿ ನಿಶ್ಚಿಂತೆಯಿಂದ ಬದುಕುವುದಾದರೂ ಹೇಗೆ ಕೊಲೆಗಳ ಮೇಲೆ ಕೊಲೆಗಳು ನಡೆಯುತ್ತಿದ್ದರೂ ಸರಕಾರಗಳು ಏನು ಮಾಡುತ್ತಿವೆ ಕೊಲೆಗಡುಕರನ್ನು ಬಂಧಿಸಿ ಅವರಿಗೆ ಉಗ್ರ ಶಿಕ್ಷೆ ವಿಧಿಸಿ ಮುಂದೆ ಇಂತಹ ಘಟನೆಗಳು ಸಂಭವಿಸದಂತೆ ಇವರು ಕೈಗೊಂಡಿರುವ ಕ್ರಮವಾದರೂ ಏನು

  • ಎಂ ಛಾಯಪತಿ  ಕುಂದಾಪುರ