ಸರಕಾರಿ ಕಚೇರಿ ಇಷ್ಟೊಂದು ದಿನ ಬಾಗಿಲು ಮುಚ್ಚಿದರೆ ಹೇಗೆ

ಸಚಿವ ಸಂಪುಟ ಸಭೆ 2018ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಗೆ ಅನುಮೋದನೆ ನೀಡಿದೆ ಮುಂಬರುವ ವರ್ಷದಲ್ಲಿ 23 ಸಾರ್ವತ್ರಿಕ ರಜೆಗಳು ಹಾಗೂ ಎರಡನೇ ಶನಿವಾರ ಮತ್ತು ಭಾನುವಾರ ಸೇರಿಸಿದರೆ 87 ರಜೆಗಳನ್ನು ಪ್ರಕಟಿಸಿರುವುದು ಕೆಲಸದ ಸಂಸ್ಕøತಿಯ ಸ್ಪಷ್ಟ ಪರಿಕಲ್ಪನೆ ನಮ್ಮ ವ್ಯವಸ್ಥೆಗೆ ಇಲ್ಲದಿರುವುದನ್ನು ಸೂಚಿಸುವಂತಿದೆ. ಸರಕಾರಿ ಕೆಲಸ ದೇವರ ಕೆಲಸ ಆದರೆ ಸರಕಾರಿ ಕಚೇರಿಗಳು ಇಷ್ಟೊಂದು ದಿನ ಬಾಗಿಲು ಮುಚ್ಚಿದರೆ ಅದನ್ನು ಯಾವ ಪ್ರಜ್ಞಾವಂತ ಸಮಾಜವೂ ಸಮರ್ಥಿಸಿಕೊಳ್ಳಲಿಕ್ಕೆ ಸಾಧ್ಯವಿಲ್ಲ ಸಾರ್ವಜನಿಕರು ತಮ್ಮ ಕೆಲಸಕ್ಕಾಗಿ ಕಚೇರಿ ಎದುರು ಸಾಲುಗಟ್ಟಿ ನಿಲ್ಲಬೇಕಾಗಬಹುದು ಹಾಗೂ ಶಿಕ್ಷಣ ವ್ಯವಸ್ಥೆ ಸೆಮಿಸ್ಟರ್ ಪದ್ಧತಿಯಾಗಿದ್ದರಿಂದ ಇರುವ ಆರು ತಿಂಗಳಲ್ಲಿ ಇಷ್ಟೊಂದು ರಜೆ ಬಂದರೆ ಹೇಗೆ ಅಲ್ಲದೆ ಬ್ಯಾಂಕುಗಳಲ್ಲಿ ಗ್ರಾಹಕರ ನಗದು ವ್ಯವಹಾರ ಹೆಚ್ಚಿರುವುದರಿಂದ ರಜೆಗಳಿಂದ ಕೆಲಸದ ಒತ್ತಡ ಹೆಚ್ಚಾಗುವ ಸಾಧ್ಯತೆಯೂ ಇದೆ ಆದ್ದರಿಂದ ಈ ರಜೆಗೆ ಸಂಬಂಧಿಸಿದಂತೆ ಸರಕಾರ ತನ್ನ ನಿರ್ಧಾರವನ್ನು ಪುನರ್ ವಿಮರ್ಶೆಗೊಳಪಡಿಸಬೇಕಿದೆ

  • ಗುರುದಾಸ್ ಕರ್ಕೇರ  ಹೆಜಮಾಡಿಕೋಡಿ