ನೋಟು ಅಮಾನ್ಯ ಮಾಡಿದ್ದಕ್ಕಾಗಿ ದೇಶದ ಜನ ಸಾಯಲು ಸಿದ್ಧರಾಗÀಬೇಕೆಂದರೆ ಏನರ್ಥ ?

ನನಗೆ ತಿಳಿಸಿರುವ ಹಾಗೆ ಸ್ವತಂತ್ರ ಭಾರತದಲ್ಲಿ ನೋಟುಗಳನ್ನು ಮೊದಲನೇ ಬಾರಿಗೆ ಅಮಾನ್ಯಗೊಳಿಸಿರುವುದು 1978ನೇ ಇಸವಿಯಲ್ಲಿ. ಇದನ್ನು ಮಾಡಿದವರು ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿಯವರು. ಆಗ ನೋಟು ಅಮಾನ್ಯಕರಣದಿಂದ ಜನಸಾಮಾನ್ಯರಿಗೆ ಯಾವ ತೊಂದರೇನೂ ಆಗಿಲ್ಲ. ಏಕೆಂದರೆ ಅಂದು ಒಂದು ಸಾವಿರ ಮುಖಬೆಲೆಯ ನೋಟುಗಳು ಜನಸಾಮಾನ್ಯರ ಕೈಗೆ ಬರುತ್ತಲೇ ಇರಲಿಲ್ಲ. ಆದರೆ ಇಂದು ಐನೂರು ಮತ್ತು ಸಾವಿರ ರೂಪಾಯಿ ನೋಟುಗಳು ಭಿಕ್ಷುಕರ ಕೈಯಲ್ಲೂ ಕಾಣಸಿಗುತ್ತದೆ. ಇವುಗಳನ್ನು ಅಮಾನ್ಯಗೊಳಿಸುವಾಗ ಬಹಳ ಮುಂದಾಲೋಚನೆ ಮಾಡಬೇಕಾಗಿತ್ತು. ನಮ್ಮ ಪ್ರಧಾನಮಂತ್ರಿ ಹಾಗೆ ಮಾಡಿಲ್ಲವೆಂಬುವುದು ಸ್ಪಷ್ಟ. ಈ ನೋಟುಗಳು ಅಮಾನ್ಯಗೊಂಡುದರ ಪರಿಣಾಮವಾಗಿ ಇಷ್ಟರಲ್ಲೇ ಸುಮಾರು ಎಂಭತ್ತು ಜನ ಪ್ರಾಣ ಕಳೆದುಕೊಂಡಿರುತ್ತಾರೆ. ಆದರೆ ಇದು ನಮ್ಮ ದೇಶಭಕ್ತರಿಗೆ ದೊಡ್ಡ ವಿಷಯವಲ್ಲ. ಅವರು ಹೇಳುತ್ತಾರೆ ಎಂಬತ್ತು ಜನ ಏನು, ದೇಶಕ್ಕಾಗಿ 120 ಕೋಟಿ ಜನ ಸಾಯುವುದಕ್ಕೆ ಸಿದ್ಧರಿರಬೇಕು ಅಂತ.  ಅವರು ಇನ್ನೂ ಮುಂದುವರಿದು ಹೇಳುತ್ತಾರೆ. ಇಲ್ಲಿ ಸತ್ತಿರುವುದು ಬರೇ ಎಂಭತ್ತು ಜನ, ಕಪ್ಪು ಹಣ ಹೊಂದಿರುವವರು ಮಾತ್ರ ನಾವು ನಿರೀಕ್ಷಿಸಿದಷ್ಟು ಕಪ್ಪು ಹಣ ಹೊಂದಿದವರು ಸತ್ತಿಲ್ಲ ಅಂತ. ಇಂತಹ ಪ್ರಕರಣಗಳಲ್ಲಿ ಬೇರೆ ದೇಶಗಳಲ್ಲಿ ಸಾವಿರಾರು ಜನ ಸತ್ತಿದ್ದಾರಂತೆ ?

  • ತುಕರಾಮ ಕೊಂಚಾಡಿ, ಪೆರ್ಲಗುರಿ-ಮಂಗಳೂರು