ಬಿಜೆಪಿ ಎಂಎಲ್ಲೆ ಸೋಮ್ ಏಕೆ ರಾಜಕೀಯ ತೊರೆಯಬೇಕು ?

ಮಾಂಸ ಸಂಸ್ಕರಣಾ ಘಟಕ ಪ್ರಕರಣ

ಉತ್ತರ ಪ್ರದೇಶದ ಸರ್ದಾನಾ ವಿಧಾನಸಭಾ ಕ್ಷೇತ್ರದ ಚುನಾಯಿತ ಪ್ರತಿನಿಧಿಯಾದ ಸಂಗಿತ್ ಸಿಂಗ್ ಸೋಮ್ ಮತ್ತು ಇಬ್ಬರು ಸಹವರ್ತಿಗಳು ಅಲಿಘರನಲ್ಲಿ ಮಾಂಸ ಸಂಸ್ಕರಣಾ ಘಟಕ ಸ್ಫಾಪಿಸಲು ಭೂ ಸ್ವಾದೀನ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಅಲ್ ದುವಾ ಆಹಾರ ಸಂಸ್ಕರಣೆ ಪ್ರೈವೆಟ್ ಲಿಮಿಟೆಡ್ ಎಂಬ ಕಂಪನಿಯ ಹೆಸರಿನಲ್ಲಿ ಭೂಮಿಯನ್ನು ಖರೀದಿಸಲಾಗಿದ್ದು ಸಂಗೀತ್ ಸೋಮ್, ಮೊಯಿನುದ್ದಿನ್ ಖುರೇಷಿ ಮತ್ತು ಯೋಗೇಶ್ ರಾವತ್ ಕಂಪನಿಯ ನಿರ್ದೇಶಕರಾಗಿದ್ದಾರೆ. ಅವರ ವೆಬ್ ತಾಣದಲ್ಲಿ ಈ ಕಂಪನಿ ಹಲಾಲ್ ಮಾಡಿದ ಮಾಂಸದ ಪ್ರಮುಖ ರಫ್ತು ಉದ್ದಿಮೆ ಎಂದು ಬಣ್ಣಿಸಲಾಗಿದೆ.

ಅದು ಹಲಾಲ್ ಮಾಡಿದ ಎಮ್ಮೆ ಮಾಂಸ, ಕುರಿ, ಮೇಕೆಯ ಮಾಂಸದ ಮತ್ತು ಚರ್ಮದ ರಫ್ತು ಉದ್ದಿಮೆ ಎಂದು ನಮೂದಿಸಲಾಗಿದೆ. ಕೆಲವು ದಿನಗಳ ಹಿಂದೆ ದಾದ್ರಿ ತಾಲ್ಲೂಕಿನ ಬಿಶಾರ ಗ್ರಾಮಕ್ಕೆ ಭೇಟಿ ನೀಡಿದ್ದ ಸೋಮ್ ಉತ್ತರಪ್ರದೇಶ ಸರ್ಕಾರ ಗೋಹಂತಕರಿಗೆ ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿದ್ದರು. ತಾವು ಈ ಜಮೀನು ಖರೀದಿಸಿರುವುದು ನಿಜವೇ ಆದರೂ ತಮ್ಮನ್ನು ಕಂಪನಿಯ ನಿರ್ದೇಶಕರಾಗಿ ನೇಮಿಸಿರುವ ವಿಷಯ ತಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಒಂದು ವೇಳೆ ಈ ಕಂಪನಿಯಲ್ಲಿ ತಮ್ಮ ಪಾತ್ರ ಇದೆ ಎಂದು ಸಾಬೀತದರೆ ತಾವು ರಾಜಕೀಯ ತೊರೆಯುವುದಾಗಿಯೂ ಸೋಮ್ ಘೋಷಿಸಿದ್ದರು.

2005ರಲ್ಲಿ ಕಂಪನಿ ಆರಂಭವಾದ ದಿನದಿಂದಲೂ ಸೋಮ್ ನಿರ್ದೇಶಕರಾಗಿದ್ದಾರೆ. ಚುನಾವಣಾ ಪ್ರಮಾಣ ಪತ್ರದಲ್ಲಿ ಸೋಮ್ ನೀಡಿದ್ದ ವಿಳಾಸವೇ ಕಂಪನಿಯ ದಾಖಲೆಗಳಲ್ಲೂ ಲಭ್ಯವಾಗಿದೆ. ಇದೇ ಅಲ್ಲದೆ ಸಂಗೀತ್ ಸೋಮ್ ಎಂ ಕೆ ಓವರ್‍ಸೀಸ್ ಎಂಬ ಕಂಪನಿಯಲ್ಲಿ ಮೊಹಮ್ಮದ್ ಕಾಮಿಲ್ ಅವರೊಡನೆ ಸಹವರ್ತಿಯಾಗಿದ್ದು ಮಾಂಸ ಸಂಸ್ಕರಣಾ ಘಟಕವನ್ನು ನಡೆಸುತ್ತಿರುವುದು ವರದಿಯಾಗಿದೆ.

2013ರಲ್ಲಿ ಕೋಮುದ್ವೇóಷ ಹರಡುವ ಭಾಷಣಮಾಡಿದ್ದ ಹಿನ್ನೆಲೆಯಲ್ಲಿ ಸೋಮ್ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಮೊಕದ್ದಮೆಯನ್ನೂ ದಾಖಲಿಸಲಾಗಿತ್ತು. (ಕೃಪೆ : ಸ್ಕ್ರೋಲ್)