ಯಡ್ಡಿಯಂಥ ಭ್ರಷ್ಟರ ಉಪದೇಶ ಯಾರಿಗೆ

ಇಂದಿನ ರಾಜಕಾರಣ ಸಂಪೂರ್ಣ ಹೊಲಸಾಗಿದೆ. ತಾನು ಜನಪ್ರತಿನಿಧಿ ಎಂದು ಹೇಳಿಕೊಳ್ಳಲು ನಾಚಿಕೆ ಪಡುವಂತಹ ವಾತಾವರಣವಿದೆ.
ರಾಜ್ಯದಲ್ಲಿ ಮೂರು ಪಕ್ಷಗಳಲ್ಲಿಯೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಯಡ್ಡಿಯೂರಪ್ಪನವರು ತಮ್ಮನ್ನು ತುಂಬಾ ಗೌರವದಿಂದ ಕಂಡರೆಂದು ಎಸ್ ಎಂ ಕೃಷ್ಣ ಇತ್ತೀಚೆಗೆ ಹೇಳಿಕೊಂಡಿದ್ದರು. ಯಡ್ಡಿಯೂರಪ್ಪರೇನೂ ಸತ್ಯ ಹರಿಶ್ಚಂದ್ರರಲ್ಲ. ಮಹಾಭ್ರಷ್ಟ ರಾಜಕಾರಣಿ ಎಂಬುದು ಇಡೀ ರಾಜ್ಯದ ಜನತೆಗೆ ಗೊತ್ತಿರುವ ವಿಷಯ. ಅವರ ಹೊಗಳಿಕೆಗೆ ಎಸ್ ಎಂ ಕೃಷ್ಣ ಮಾರು ಹೋದರೆಂದರೆ ನಾಚಿಕೆಗೇಡಲ್ಲವೇ  ಯಡ್ಡಿಯೂರಪ್ಪ ಅಧಿಕಾರದಲ್ಲಿದ್ದಾಗ ಮಾಡಿದ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ಬ್ರಹ್ಮಾಂಡದಷ್ಟಿದೆ. ರೈತರ ಆತ್ಮಹತ್ಯೆ ತಡೆಯುವವರಿಲ್ಲ. ಅಪ್ರಾಮಾಣಿಕರು, ಭ್ರಷ್ಟರ ಕೈ ಮೇಲಾಗುತ್ತಿರುವುದು ದುರದೃಷ್ಟಕರ

  • ಸುಕೇಶ್ ದೇವಾಡಿಗ  ಬ್ರಹ್ಮಾವರ