ವಿದ್ಯುತ್ ಸಮಸ್ಯೆ ಮುಂಜಾಗ್ರತೆ ಇರಲಿ

ಈ ವರ್ಷ ಭರ್ಜರಿ ಮಳೆಯಿಂದ ಹೆಚ್ಚಿನ ಎಲ್ಲಾ ಜಲಾಶಯಗಳು ತುಂಬಿವೆ ವಿವಿಧ ರೂಪಗಳಲ್ಲಿ ನೀರು ಕೂಡಾ ಸಂಗ್ರಹವಾಗಿದೆ ಆದರೂ ಜಿಲ್ಲೆಯ ವಿವಿಧೆಡೆ ಕಳೆದ ಕೆಲ ದಿನಗಳಿಂದ ಯಾವುದೇ ಪೂರ್ವ ಸೂಚನೆ ನೀಡದೇ ಪದೇ ಪದೇ ವಿದ್ಯುತ್ ಕಡಿತ ಮಾಡಲಾಗುತ್ತಿದೆ ಈಗಲೇ ವಿದ್ಯುತ್ ಅಭಾವವಾದರೆ ಇನ್ನು ಚಳಿಗಾಲ ಕಳೆದು ಬೇಸಿಗೆ ಬರುವಷ್ಟರಲ್ಲಿ ಇನ್ನೇನು ಕಾದಿದೆಯೋ ಎಂಬ ಭಯ ಕಾಡುವಂತಾಗಿದೆ
ಈಗಿನ ವಿದ್ಯುತ್ ಕಡಿತಕ್ಕೆ ಸಮಜಾಯಿಸಿ ನೀಡುವ ಬದಲು ಈಗಲೇ ಈ ಸಮಸ್ಯೆಗಳ ಬಗ್ಗೆ ವಿದ್ಯುತ್ ಇಲಾಖೆ ಮುಂಜಾಗರೂಕತೆ ಇರಲಿ ಸರಿಯಾದ ಕ್ರಮ ತೆಗೆದುಕೊಂಡರೆ ಮುಂದಿನ ದಿನಗಳಲ್ಲಿ ಜಿಲ್ಲೆ ಕತ್ತಲೆಯಲ್ಲಿ ಇರುವುದನ್ನು ತಪ್ಪಿಸಬಹುದಾಗಿದೆ

  • ಶಂಶೀರ್  ಬುಡೋಳಿ ಬಂಟ್ವಾಳ

LEAVE A REPLY