ಚುನಾವಣಾ ನೀತಿ ಸಂಹಿತೆ ಯಾಕೆ

ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳ ಉಪಚುನಾವಣೆಯ ಹಿನ್ನೆಲೆಯಲ್ಲಿ ಸ್ಥಾಪಿಸಲಾಗಿರುವ ಚೆಕ್ ಪೋಸ್ಟುಗಳಲ್ಲಿ ತಪಾಸಣೆಗೆ ಕಾರು ನಿಲ್ಲಿಸದೇ ಹೋಗುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ ಎಂ ಇಬ್ರಾಹಿಂ ವಿರುದ್ಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಯಿತೆಂದು ಮಾಧ್ಯಮಗಳಲ್ಲಿ ವರದಿ ನೋಡಿದೆ  ಇಂತಹ ಪ್ರಕರಣಗಳು ದಾಖಲಾಗುತ್ತಲೇ ಇರುತ್ತವೆ. ವಿಧಾನಸಭೆ ಲೋಕಸಭೆ ವಿಧಾನಪರಿಷತ್ತು ಇತ್ಯಾದಿ ಚುನಾವಣೆಗಳ ಸಂದರ್ಭ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುತ್ತಲೇ ಇರುತ್ತವೆ
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾದ ವಿಚಾರ ತಿಳಿದೊಡನೆ ಆಯಾಯ ವಲಯದ ಸೆಕ್ಪರ್ ಮ್ಯಾಜಿಸ್ಟ್ರೇಟರ್ ಆಯಾಮ ಪ್ರದೇಶದ ಪೊಲೀಸ್ ಠಾಣೆಗೆ ಮಾಹಿತಿ ನೀಡುತ್ತಾರೆ. ಆ ಮಾಹಿತಿಯಾಧಾರದ ಮೇಲೆ ಪೊಲೀಸರು ನೀತಿ ಸಂಹಿತೆ ಉಲ್ಲಂಘಿಸಿದವರ ವಿರುದ್ಧ ನ್ಯಾಯಾಲಯಕ್ಕೆ ಎಫ್ ಐ ಆರ್ ಸಲ್ಲಿಸುತ್ತಾರೆ. ನಂತರ ಆ ಪ್ರಕರಣಗಳಲ್ಲಿ ಯಾರ ಯಾರ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಲಾಯಿತು, ಯಾರು ಯಾರಿಗೆ ಶಿಕ್ಷೆಯಾಯಿತು ಎಂಬ ವಿಚಾರವಾಗಿ ಯಾವ ಸುದ್ದಿಯೂ ಪ್ರಕಟವಾಗುವುದಿಲ್ಲ. ಪ್ರತಿಯೊಂದು ಕ್ಷೇತ್ರದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುವ ನೂರಾರು ಪ್ರಕರಣಗಳು ದಾಖಲಾದರೂ ಬೆರಳೆಣಿಕೆಯಷ್ಟು ಪ್ರಕರಣಗಳಲ್ಲಿಯೂ ದೋಷಾರೋಪಣಾ ಪಟ್ಟಿ ಸಲ್ಲಿಕೆಯಾಗುತ್ತಿಲ್ಲ. ಇಂತಹ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವುದಂತೂ ಗಗನ ಕುಸುಮವೇ ಸರಿ
ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವವರಿಗೆ ಶಿಕ್ಷೆ ಇಲ್ಲ ಎಂದ ಮೇಲೆ ಚುನಾವಣೆಗೊಂದು ನೀತಿ ಸಂಹಿತೆಯಾದರೂ ಏಕೆ ಬೇಕು

  • ಚಂದ್ರಕಾಂತ ಸುವರ್ಣ
    ತೊಕ್ಕೊಟ್ಟು ಉಳ್ಳಾಲ