ನಳಿನರೇ ಪಂಪ್ವೆಲ್ ತೊಕ್ಕೊಟ್ಟು ಹೆದ್ದಾರಿ ಮೇಲ್ಸೇತುವೆ ಕಾಮಗಾರಿ ಆಮೆಗತಿ ಹಿಂದೆ ಏನಿದೆ ಹಿಕ್ಮತ್ತು

ಪಂಪ್ವೆಲ್ ಮತ್ತು ತೊಕ್ಕೊಟ್ಟು ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಗಳ ಕಾಮಗಾರಿ ಆರಂಭವಾಗಿ ವರ್ಷಗಳೇ ಉರುಳಿವೆ. ಇದು ಇಂತಹ ತಿಂಗಳಲ್ಲಿ ಮುಗಿಯುತ್ತವೆಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯವರೂ, ಸಂಸದರು ಹಲವು ಬಾರಿ ದಿನಾಂಕಗಳನ್ನು ಪ್ರಕಟಿಸಿದ್ದಾರೆ. ಈಗ ಆ ಎರಡೂ ಕಡೆ ನಡೆಯುತ್ತಿರುವ ಕಾಮಗಾರಿಯನ್ನು ನೋಡಿದರೆ ಇದು ಮುಗಿಯಲು ಇನ್ನೊಂದೆರಡು ವರ್ಷವಾದರೂ ಬೇಕಾದೀತು ಎಂದು ಕಾಣುತ್ತದೆ ಕೇವಲ ನಾಲ್ಕೈದು ಮಂದಿ ಕೆಲಸಗಾರರು ಬೇಕೋ ಬೇಡವೋ ಎಂಬಂತೆ ಕೆಲಸ ಮಾಡುತ್ತಿರುವಂತಹ ದಯನೀಯ ಸ್ಥಿತಿಯನ್ನು ಕಂಡೂ ಸಹಿಸುವಂತಹ ದೌರ್ಬಲ್ಯ ನಮ್ಮ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಇರುವುದನ್ನು ಕಾಣುವಾಗ ಅಯೋ ಅನಿಸುತ್ತದೆ. 2010ರಿಂದ ಆರಂಭಗೊಂಡ ಈ ಬೃಹತ್ ಕಾಮಗಾರಿ ಗಂಭೀರ ವೇಗದಲ್ಲಿ ನಡೆಯಬೇಕಾಗಿತ್ತು ಆದರೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅದ್ಯಾವ ಪ್ರಯೋಜನಕ್ಕಾಗಿ, ಕಾಮಗಾರಿ ನಿಧಾನಕ್ಕೆ ನಡೆಯುತ್ತಿರಲೆಂದು ಬಿಟ್ಟಿದೆಯೋ ಏನೋ ಕಾಮಗಾರಿಯ ಹೊಣೆ ಹೊತ್ತ ನವಯುಗ ಕಂಪೆನಿಯಂತೂ ಈ ವಿಚಾರದಲ್ಲಿ ನಿಶ್ಚಿಂತೆ ಹೊಂದಿದೆ. ಕಾರಣ ಮೂರು ಕಡೆ ಸುಂಕದ ಗೇಟುಗಳನ್ನಿರಿಸಿ ಪ್ರತಿ ದಿನ ರೂ ಕೋಟಿಗಳಲ್ಲಿ ಸುಂಕ ಸಂಗ್ರಹಿಸುತ್ತದೆ ಕಾಮಗಾರಿ ಮುಂದೆ ಹೋದಷ್ಟು ಇವರಿಗೆ ಲಾಭ ಅಂತಿಮವಾಗಿ ಕಾಮಗಾರಿ ವಿಳಂಬದಿಂದ ವಾಹನಿಗರ ಮತ್ತು ಸಾರ್ವಜನಿಕರ ಸುಂಕದ ಹಣ ಕಂಪೆನಿಯ ತಿಜೋರಿಯನ್ನು ತುಂಬಿಸುತ್ತಾ ಹೋಗುತ್ತದೆ ಭರ್ಜರಿ ಟೋಲ್ ಗೇಟ್ ನಿರ್ಮಿಸಿ ಭಾರೀ ಪ್ರಮಾಣದ ಸುಂಕ ವಸೂಲು ಮಾಡುವ ಹೆದ್ದಾರಿ ಅದೇ ರೀತಿಯಲ್ಲಿ ಸಂಚಾರ ಯೋಗ್ಯವಾಗಿರಬೇಕು. ತೊಕ್ಕೊಟ್ಟು ಪಂಪ್ವೆಲ್ ಬಳಿ ಸಂಚಾರ ತೀರಾ ಕಠಿಣವಾಗಿರುವಾಗ ಸುಂಕ ಪಾವತಿಗೆ ಅರ್ಥವೇ ಇರುವುದಿಲ್ಲ ಇದನ್ನು ಮೋಸ ದರೋಡೆ ಎಂದೇ ಹೇಳಬೇಕಾಗುತ್ತದೆ
ಜನರನ್ನು ವಂಚಿಸುವ ಗುತ್ತಿಗೆದಾರರು ಅವರನ್ನು ತಣ್ಣಗೆ ಬೆಂಬಲಿಸುವ ಇಲಾಖೆ ಮತ್ತು ಅಧಿಕಾರಿಗಳೂ ಇರುವಾಗ ಸಾಮಾನ್ಯ ಜನರು ಏನು ಮಾಡಲು ಸಾಧ್ಯ ಈ ದುರವಸ್ಥೆಗೆ ಕಾರಣರಾದ ಅಧಿಕಾರಿಗಳ ಸಿಬ್ಬಂದಿ ಕುಟುಂಬಗಳಿಗೆ ಶಾಪ ಹಾಕುತ್ತಾ ಸಹಿಸುವುದರೊಂದೇ ದಾರಿ

  • ಮಹೇಶ್ ಕೆ  ಮಂಗಳೂರು