ಕೇಂದ್ರ ಸರಕಾರಕ್ಕೆ ಮತದಾರರ ಚೀಟಿ ಆಧಾರ್ ಕಾರ್ಡಿನೊಂದಿಗೆ ಲಿಂಕ್ ಮಾಡಲು ಏನಡ್ಡಿ

ಆಧಾರ್ ಕಾರ್ಡ್ ಬ್ಯಾಂಕ್ ಅಕೌಂಟಿಗೆ ಪಾನ್ ಕಾರ್ಡಿಗೆ ಮೊಬೈಲ್ ಸಂಖ್ಯೆಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಜಿಎಸ್ಟಿ ನೋಂದಣಿ ಪಡೆಯಲು ಇನ್ನೂ ಇದೇ ತರಹ ಸರಕಾರದ ಎಲ್ಲಾ ವ್ಯವಹಾರಗಳಲ್ಲಿ ಖಾಸಗಿ ವಲಯದಲ್ಲಿ ಇನ್ನೂ ಮುಂತಾದ ಸಂದರ್ಭಗಳಲ್ಲಿ ಕಡ್ಡಾಯ ಮಾಡಲಾಗಿದೆ ವಿಚಿತ್ರವೆಂದರೆ ಮತದಾರ ಚೀಟಿಗಳಿಗೆ ಏಕೆ ಲಿಂಕ್ ಮಾಡಲು ಸರಕಾರ ಆದೇಶ ಹೊರಡಿಸಿಲ್ಲ ಇದರ ಔಚಿತ್ಯವೇನು ಈ ಮತದಾರ ಚೀಟಿಯನ್ನು ಆಧಾರ್ ಕಾರ್ಡಿನೊಂದಿಗೆ ಬೆಸೆದು ಪರೀಕ್ಷಿಸಬಾರದೇಕೆ ಹೀಗೆ ಮಾಡಿದರೆ ಭಾರತೀಯ ಚುನಾವಣಾ ರಂಗದಲ್ಲಿ ಇದೊಂದು ಮಹೋನ್ನತ ಬದಲಾವಣೆಯನ್ನು ತಂದಂತಾಗುತ್ತದೆ ಬೆರಳ ತುದಿಗೆ ಶಾಯಿಯಿಂದ ಗುರುತು ಹಾಕುವ ಬದಲು ಬೆರಳಿನ ಸ್ಕ್ಯಾನ್ ಮಾಡಿದರೆ ಸಾಕು 2ನೇ ಬಾರಿ ಸ್ಕ್ಯಾನ್ ಮಾಡಲು ಸಾಧ್ಯವಾಗದಂತಹ ವಿಧಾನವನ್ನು ಯಂತ್ರದಲ್ಲಿ ಬದಲಾಯಿಸಬಹುದು ಮತದಾನ ಪಟ್ಟಿಯಲ್ಲಿ ಡಬ್ಬಲ್ ಎಂಟ್ರಿಗಳನ್ನು ಒಂದೇ ಬಾರಿ ಇಲ್ಲದಂತೆ ಮಾಡಬಹುದು ಮರಣ ಹೊಂದಿರುವವರ ಮತವನ್ನು ಚಲಾಯಿಸಲಾಗುವುದಿಲ್ಲ ಪ್ರತಿ ಸರಕಾರಿ ಕಚೇರಿಗಳಲ್ಲಿ ಈ ಯಂತ್ರವನ್ನು ಇಟ್ಟು ಆಯಾ ಕಚೇರಿಯಲ್ಲೇ ನಿಮ್ಮ ಮತದಾನ ಮಾಡಬಹುದು ರಜೆ ಕೊಡುವ ಪರಿಸ್ಥಿತಿ ಇರುವುದಿಲ್ಲ ನಕಲಿ ಮತದಾನ ತಡೆಯಲು ಸಾಧ್ಯವಿಲ್ಲ ಎಲೆಕ್ಷನ್ ಬೂತುಗಳಲ್ಲಿ ಏಜೆಂಟರನ್ನು ನೇಮಿಸುವ ಅಗತ್ಯವಿಲ್ಲ ಮುಖ್ಯವಾಗಿ ಬೆರಳಿನ ಸ್ಕ್ಯಾನ್ ಮಾಡುವಾಗ ಯಂತ್ರದ ಮೇಲೆ ಬೆರಳನ್ನು ಇಟ್ಟ ತಕ್ಷಣ ಆತನ ವಿಧಾನಸಭಾ ಕ್ಷೇತ್ರದ ಹೆಸರು ಅಭ್ಯರ್ಥಿ ಪಟ್ಟಿ ವಯಸ್ಸು ಭಾವಚಿತ್ರಗಳೆಲ್ಲವೂ ಲಭ್ಯವಾಗುವಂತಹ ತಂತ್ರಜ್ಞಾನ ರಚಿಸಿದರೆ ಸರಕಾರಕ್ಕೆ ಚುನಾವಣೆ ಎನ್ನುವ ತೊಂದರೆ ತೊಡಕು ವಿಳಂಬದ ನೀತಿ ಇರುವುದಿಲ್ಲ ಏಳಿ ಏದ್ದೇಳಿ ಡಿಜಿಟಲ್ ಇಂಡಿಯಾ ಮಾಡಿ ಎಂದು ಪ್ರಧಾನಮಂತ್ರಿಗಳ ಕರೆ ನೀಡಿರುವ ಉದ್ದೇಶ ಮೇಲ್ಕಂಡ ರೀತಿಯಲ್ಲಿ ಮಾಡಿದರೆ ಮಾತ್ರ ಸಾಧ್ಯ ಇಲ್ಲದಿದ್ದರೆ ಡಿಜಿಟಲ್ ಇಂಡಿಯಾ ಎನ್ನುವ ಪದಕ್ಕೆ ಅರ್ಥ ಇರುವುದಿಲ್ಲ ವಿಚಾರ ಮಾಡಿ

  • ಎಂ ದಿನೇಶ್ ಸುವರ್ಣ  ಎಡಪದವು

LEAVE A REPLY