ಪುತ್ತೂರಿಗೆ ಹೊಸ ಬಸ್ಸುಗಳು ಯಾಕಿಲ್ಲ ?

ಜಿಲ್ಲಾ ಕೇಂದ್ರವಾಗಲಿರುವ ಪುತ್ತೂರು ಈಗ ತಾಲೂಕು ಬಿಡಿ  ಬರೀ ಹಳ್ಳಿಯಂತೆ ಎನಿಸುತ್ತಿದೆ. ಬಸ್ ಸ್ಟ್ಯಾಂಡ್ ಆರಂಭವಾಗಿ ಒಂದು ವರ್ಷವಾಗುತ್ತಾ ಬರುತ್ತಿರಲು ಈಗಲೂ ಹಳೆ ಗುಜರಿ ಬಸ್ಸುಗಳು  ಬಾಗಿಲು ಇಲ್ಲದ ಸರಿಯಾಗಿ ಓಡದ ಬಸ್ಸುಗಳೇ ಇಲ್ಲಿನವರಿಗೆ ಗತಿ  ಸಿಟಿ ಬಸ್ ಬರುತ್ತಿದೆ ಎಂದು ಸಾರಿಗೆ ಇಲಾಖೆಯ ಸಭೆಯಲ್ಲಿ ಪತ್ರಿಕೆಗಳಲ್ಲಿ ಮಾತ್ರ ಹೇಳಿಕೆ. ಇಲ್ಲಿ ಸಿಟಿಬಸ್  ನರ್ಮ್ ಬಸ್ ಇಲ್ಲವೇ ಇಲ್ಲ. ಶಾಸಕಿಯವರಿಗೆ ಇದರ ಬಗ್ಗೆ ಯೋಚನೆಯೇ ಇಲ್ಲ. ಇಲ್ಲಿ ಹಲವಾರು ಬಡಾವಣೆಗಳೂ ಆದ್ರೂ ಸಿಟಿ ಬಸ್ ಇಲ್ಲ. ಎಲ್ಲರಿಗೂ ರಿಕ್ಷಾವೇ ಗತಿ  ಆದರೂ ಇಲ್ಲಿಯ ಜನ ಪೇಪರಿನಲ್ಲಿ ಬರುವ ಸಾರಿಗೆ ಇಲಾಖೆಯ ಸುದ್ದಿಯನ್ನು ನಂಬಿ ತೆಪ್ಪಗೆ ಕುಳಿತಿದ್ದಾರೆ.

  • ಮುರಾರಿ ಪುತ್ತೂರು