ಕಾವ್ಯಾ ಅಸಹಜ ಸಾವಿನ ತನಿಖೆ ಸಿಬಿಐಗೇಕಿಲ್ಲ

ಐಎಎಸ್ ಅಧಿಕಾರಿ ಡಿ ಕೆ ರವಿ ಆತ್ಮಹತ್ಯೆ ಪ್ರಕರಣವನ್ನು ಅವರ ಕುಟುಂಬದ ಒತ್ತಾಯದ ಮೇರೆಗೆ ರಾಜ್ಯ ಸರಕಾರವೇ ಸಿಬಿಐಗೆ ವಹಿಸಿಕೊಟ್ಟಿತು. ಡಿವೈಎಸ್ಪಿ ಗಣಪತಿಯ ಆತ್ಮಹತ್ಯೆ ಪ್ರಕರಣವನ್ನೂ ಕುಟುಂಬಿಕರ ಅಹವಾಲಿನ ಮೇರೆಗೆ ಸ್ವತಃ ಸುಪ್ರೀ ಕೋರ್ಟೇ ಸಿಬಿಐಗೆ ಕೊಡಲು ಆದೇಶಿಸಿದೆ. ಹಾಗಾದರೆ ಮೂಡಬಿದ್ರಿಯ ಕಾವ್ಯಾ ಪೂಜಾರಿಯ ಅಸಹಜ ಮರಣದ ಪ್ರಕರಣವನ್ನೂ ಸಿಬಿಐ ತನಿಖೆಗೆ ಯಾಕೆ ಕೊಡಬಾರದು ಕರ್ನಾಟಕ ಮಕ್ಕಳ ಹಕ್ಕು ರಕ್ಷಣಾ ಆಯೋಗದ ತ್ರಿಸದಸ್ಯರ ತಂಡವು ಕಾವ್ಯಾ ಪೂಜಾರಿಯ ಅಸಹಜ ಮರಣದ ವಿಷಯದಲ್ಲಿ ತನಿಖೆ ನಡೆಸಿದಾಗ ಮೂಡಬಿದ್ರಿಯ ಆಳ್ವಾಸ್ ಕಾಲೇಜಿನ ವಸತಿ ನಿಲಯದಲ್ಲಿ ಅನೇಕ ಕುಂದುಕೊರತೆಗಳು ಕಂಡುಬಂದಿವೆ ಎಂದು ಆಯೋಗವು ಸರಕಾರಕ್ಕೆ ವರದಿ ಸಲ್ಲಿಸಿದೆ ಈ ಆಧಾರದಲ್ಲಿ ಗಣಪತಿಯ ಆತ್ಮಹತ್ಯೆ ಪ್ರಕರಣದಂತೆ ಕಾವ್ಯಾ ಪ್ರಕರಣವನ್ನೂ ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಕಾವ್ಯ ಪೂಜಾರಿಯ ಕುಟುಂಬಿಕರು ರಾಜ್ಯ ಸರಕಾರಕ್ಕೆ ಅಥವಾ ಸುಪ್ರೀಂ ಕೋರ್ಟಿಗೆ ತಕ್ಷಣ ಮನವಿ ಸಲ್ಲಿಸಬೇಕು ಬಿಜೆಪಿಯವರ ಮಂಗಳೂರು ಚಲೋ ರ್ಯಾಲಿಯಲ್ಲಿ ಗೌರಿ ಲಂಕೇಶರ ಹತ್ಯೆಯ ತನಿಖೆಯನ್ನು ಸಿಬಿಐಗೆ ಕೊಡಬೇಕೆಂದು ಬಿಜೆಪಿ ಮುಖಂಡರು ಬೊಬ್ಬಿರಿದರು ಆದರೆ ಕಾವ್ಯಾ ಪೂಜಾರಿಯ ಅಸಹಜ ಮರಣದ ತನಿಖೆಯ ಬಗ್ಗೆ ಬಿಜೆಪಿ ನಾಯಕರು ಒಂದು ಅಕ್ಷರ ಕೂಡ ಮಾತನಾಡಲಿಲ್ಲ ಇದಕ್ಕೆ ಬಹುಶಃ ಆ ಕಾಲೇಜಿನ ಆಡಳಿತದವರು ಸಂಘ ಪರಿವಾರಕ್ಕೆ ನಿಷ್ಟರು ಎಂಬ ಕಾರಣ ಇರಬಹುದೇ

  • ಪ್ರತಿಕ್ಷಾ ಶೆಟ್ಟಿ
    ಜೈನ್ ಪೇಟ್ ಮೂಡುಬಿದಿರೆ