ಪಟಾಕಿ ಸಿಡಿಸುವ ಆದೇಶ ಯಾರಿಗೆ

ಮೊನ್ನೆ ಹೊಸ ವರ್ಷ ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಯಿತು  ಎಲ್ಲೆಡೆ ಪಟಾಕಿ ಬಾಣ ಬಿರುಸುಗಳ ಪ್ರದರ್ಶನವಿತ್ತು  ಆದರೆ ದೀಪಾವಳಿ ಸಂದರ್ಭದಲ್ಲೆಲ್ಲ  ಪಟಾಕಿ ಸುಡಬೇಡಿ  ಆದರಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ  ಎಂದೆಲ್ಲ ಬುದ್ಧಿ ಹೇಳುವ ಪ್ರಗತಿಪರರರು ಎಲ್ಲಿ ಹೋದರು   10 ಗಂಟೆ ನಂತರ ಪಟಾಕಿ ಬಿಡುವುದು ಮಹಾಪರಾಧ ಎಂಬಂತೆ ಬಿಂಬಿಸುತ್ತಿದ್ದವರೆಲ್ಲ ಡಿಸೆಂಬರ್ 31ರ ಮಧ್ಯರಾತ್ರಿ ಪಟಾಕಿಗಳನ್ನು ಹೊಡೆದಾಗ ಎಲ್ಲಿ ಮಾಯವಾದರು

  • ಗಜಾನನ  ಉಡುಪಿ