ನೋಟ್ ಬ್ಯಾನ್ ಮೊದಲು ಮೋದಿ ಪರಿಣಾಮ ಯಾಕೆ ಯೋಚಿಸಿಲ್ಲ

ಬುದ್ಧಿಜೀವಿಗಳನ್ನು ಸದಾ ದ್ವೇಷಿಸುವ, ವೈಚಾರಿಕತೆಯಿಂದ ದೂರವೇ ಇರುವ ಸಂಘ ಪರಿವಾರಕ್ಕೆ ಸೇರಿದ ನರೇಂದ್ರ ಮೋದಿಯವರು, ಅವರ ತಿಳುವಳಿಕೆಗೆ ಸರಿಯಾಗಿ ಗಣಪತಿಯ ಉದಾಹರಣೆ ಕೊಟ್ಟು, ಭಾರತದಲ್ಲಿ ಬಹಳ ಹಿಂದೆಯೇ ಪ್ಲಾಸ್ಟಿಕ್ ಸರ್ಜರಿ ಇತ್ತು ಎಂಬ ಹಾಸ್ಪಾಸ್ಪದ ಹೇಳಿಕೆಯನ್ನು ನೀಡಿದ್ದರು. ಇಂದು ನೋಟು ಅಮಾನ್ಯೀಕರಣ ಅವರ ಅಪ್ರಬುದ್ಧತೆಯ ಮತ್ತೊಂದು ನಿರ್ಧಾರವೆಂಬುದು ಬಹಳ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಸರಕಾರದ ವಿತ್ತ ಸಚಿವರು ಪ್ರಕಟಿಸಬೇಕಾದ ಒಂದು ನಿರ್ಧಾರವನ್ನು ಪ್ರಧಾನಿ ಮೋದಿಯವರು ಇದು ತನ್ನದೇ ನಿರ್ಧಾರ ಎಂಬಂತೆ ನವೆಂಬರ್ 8ರಂದು ದೂರದರ್ಶನದಲ್ಲಿ ಘೋಷಿಸಿದರು. ಸಾಕಷ್ಟು ವಿವೇಚನೆ ಮಾಡದೆ ಕೈಗೊಂಡ ಈ ನಿರ್ಧಾರದ ಪರಿಣಾಮಗಳ ಬಗ್ಗೆ ಅವರು ಊಹಿಸಲು ಇಲ್ಲ. ನವೆಂಬರ್ 9ರಂದು ಜಪಾನಿನಲ್ಲಿರುವ ಭಾರತೀಯರನ್ನುದ್ದೇಶಿಸಿ ಅವರು ಮಾಡಿದ ಭಾಷಣ ಇದನ್ನು ಸ್ಪಷ್ಟಪಡಿಸುತ್ತದೆ. ದಿನ ಬೆಳಗಾದರೆ 500 ಮತ್ತು 1000ದ ನೋಟುಗಳಿಗೆ ಬೆಲೆಯೇ ಇಲ್ಲವಾಯಿತು ಎಂದು ಅವರು ಕೈ ತಟ್ಟಿ ವ್ಯಂಗ್ಯಾಭಿನಯ ಮಾಡುತ್ತಾರೆ. ಎಷ್ಟೋ ಮಂದಿಯ ಮದುವೆಗೆ ಹಣವೇ ಇಲ್ಲ ಎಂದು ಹೇಳುತ್ತಾರೆ. ತಮ್ಮ ಸಾಮಥ್ರ್ಯವನ್ನು ಹೇಳಿಕೊಳ್ಳುವ ತವಕದಲ್ಲಿ ಅವರು ವಾಸ್ತವವನ್ನೇ ಮರೆತು ಬಿಡುತ್ತಾರೆ.
ಎರಡು ದಿನದ ಬಳಿಕ ಅವರಿಗೆ ಜ್ಞಾನೋದಯವಾಗುತ್ತದೆ. ಅಮಾನ್ಯೀಕರಣದ ದುಷ್ಪರಿಣಾಮಗಳು ತಿಳಿದು ಬರುತ್ತಿದ್ದಂತೆ, ಗೋವಾ-ಬೆಳಗಾವಿಯಲ್ಲಿ ಮಾಡಿದ ಭಾಷಣಗಳಲ್ಲಿ ವರಸೆ ಬದಲಾಗುತ್ತದೆ   ನನ್ನನ್ನು ಸುಡಲು ಬಯಸುತ್ತಿದ್ದಾರೆ  ಎಂಬಂತಹ ಹತಾಶ ನುಡಿಗಳಿಂದ ಜನರ ಒಲವು  ಸಹಾನುಭೂತಿ ಗಳಿಸಲು ಪ್ರಯತ್ನಿಸುತ್ತಾರೆ
ಮುಂದೆ ಸಿಕ್ಕಿದ ಸಾರ್ವಜನಿಕ ಸಭೆಗಳಲ್ಲೆಲ್ಲಾ ಪ್ರತಿಪಕ್ಷಗಳನ್ನು ದೂರುತ್ತಲೇ ಮುನ್ನಡೆಯುತ್ತಾರೆ  ಶ್ರೀಮಂತರು  ಕಾಳಧನ ಇದ್ದವರು ಬ್ಯಾಂಕ್ ಮುಂದೆ ಸಾಲುಗಟ್ಟಿ ನಿಂತಿದ್ದಾರೆ  ಬಡವರು ಮನೆಯಲ್ಲಿ ನೆಮ್ಮದಿಯಿಂದಿದ್ದಾರೆ  ಎಂದು ಹೇಳುತ್ತಾರೆ. ಇದು ನಿಜವಾಗಿ ವಿರುದ್ಛ ಸ್ಥಿತಿ ಎಂಬ ಅರಿವೇ ಅವರಿಗಿಲ್ಲ. ಬೇಕಾದಷ್ಟು, ನಗದು ಹರಿಯದೆ ಕೂಲಿಕಾರರಿಗೆ, ಬಡರೈತರಿಗೆ, ಸಣ್ಣ ವ್ಯಾಪಾರಿಗಳಿಗೆ ಆದ ದೊಡ್ಡ ಏಟು ಅವರ ಕಲ್ಪನೆಗೂ ಬಂದಿಲ್ಲ.
ಮೊದಲು ಅವರೂ, ಅವರ ಅನುಯಾಯಿಗಳೂ ಇದು ಕೆಲವೇ ದಿನಗಳಲ್ಲಿ ಸರಿ ಹೋಗುತ್ತದೆಂದರು. ಆ ಬಳಿಕ ಕೆಲವೇ ವಾರ ಅಂದರು, ಮುಂದೆ ದಶಂಬರ್ 30ರೊಳಗೆ ಬಳಿಕ ಎಲ್ಲವೂ ಸರಿಯಾಗುತ್ತದೆ ಎಂದರು. ಸದ್ಯದ ಸ್ಥಿತಿ ಹೇಗಿದೆ ಅಂದರೆ ಇನ್ನು ಮೂರು ತಿಂಗಳು ಕಳೆದರೂ ಪರಿಸ್ಥಿತಿಯಲ್ಲಿ ಸುಧಾರಣೆ ನಿರೀಕ್ಷಿಸುವಂತಿಲ್ಲ
ಬ್ಯಾಂಕಿನಲ್ಲಿ ನಾವಿಟ್ಟು ನಮ್ಮದೇ ಹಣವನ್ನು ಪಡೆಯಲು ನಿರ್ಬಂಧ, ವಾರಕ್ಕೆ 24,000 ಮರಳಿ ಪಡೆಯಬಹುದೆಂದ ಹೇಳಿದರೂ ಹಲವು ವಾರ ಅಷ್ಟು ಸಿಕ್ಕಿಲ್ಲ. ಇದೆಂತಹ ಘೋರ ಪರಿಸ್ಥಿತಿ ! ಮುಂದೊಂದು ದಿನ ವರ್ಷಕ್ಕೆ 10 ಲಕ್ಷ ಮಾತ್ರ ತೆಗೆಯಬಹುದು ಎಂದೂ ಬರಬಹುದು.
ಸುಮಾರು 15 ಲಕ್ಷ ಕೋಟಿ ಚಲಾವಣೆಯಲ್ಲಿದ್ದ ರೂ 500, 1000ದ ನೋಟುಗಳಲ್ಲಿ 5 ಲಕ್ಷ ಕೋಟಿ ಕಪ್ಪು ಹಣ ಇರಬಹುದೆಂದು ಇವರು ಅಂದಾಜು ಮಾಡಿದ್ದರು. ಇದೀಗ ಸುಮಾರು ರೂ 14 ಲಕ್ಷ ಕೋಟಿಗೂ ಮಿಕ್ಕಿದ ಹಣ ಬ್ಯಾಂಕುಗಳಿಗೆ ಬಂದು ಬಿಳಿಯಾಗಿದೆ.
ಕಪ್ಪುಹಣ, ಕಪ್ಪು ಹಣ ಹೇಳುತ್ತಾ ಬಂದುದು ಠುಸ್ಸಾಗಿದೆ. ತಮಾಷೆಯೇನೆಂದರೆ ಒಂದೇ ತಿಂಗಳಲ್ಲಿ ಹೊಸ ನೋಟಿನಲ್ಲೇ ಕೋಟಿಗಟ್ಟಲೆ ಕಪ್ಪು ಹಣ ಸೃಷ್ಟಿಯಾಗಿದೆ. ಆದಾಯಕರ ಇಲಾಖೆಯ ದಾಳಿಗಳಲ್ಲಿ ಇದು ಬಯಲಾಗಿದೆ. ಆ ಪ್ರಕಾರ ಮತ್ತೆ ಈ ಗುಲಾಬಿ ನೋಟುಗಳನ್ನು ಅಮಾನ್ಯೀಕರಣಗೊಳಿಸಬೇಕಲ್ಲವೇ
ನಮ್ಮ ಪ್ರಧಾನಿ ಯಾವುದೇ ಪ್ರಶ್ನೆಯನ್ನು ಎದುರಿಸಲೂ ಅವರು ಸಿದ್ಧರಿಲ್ಲ. ನೋಟು ಅಮಾನ್ಯೀಕರಣದಂತಹ ಬಹು ದೊಡ್ಡ ನಿರ್ಣಯವನ್ನು ತೆಗೆದುಕೊಂಡಾಗ ಆ ಬಗ್ಗೆ ಪಾರ್ಲಿಮೆಂಟ್ ಅಧಿವೇಶನದಲ್ಲಿ ಮೊದಲ ದಿನದಿಂದಲೇ ಹಾಜರಿದ್ದು ಚರ್ಚೆಯಲ್ಲಿ ಭಾಗವಹಿಸಬೇಕಿತ್ತು. ಪ್ರಶ್ನೆಗಳಿಗೆ ಉತ್ತರ ನೀಡಬೇಕಿತ್ತು. ಆದರೆ ಪ್ರಧಾನಿಯವರು ಹಲವು ದಿನ ಕಳೆದ ಬಳಿಕ ಆಗೊಮ್ಮೆ ಈಗೊಮ್ಮೆ ಎಂಬಂತೆ ಬಂದು ಕೂತು ಹೋದರೇ ವಿನಃ ಈ ಬಗ್ಗೆ ಸರಿಯಾದ ಉತ್ತರ ನೀಡಲಿಲ್ಲ. ಪ್ರತಿಪಕ್ಷದವರ, ಚರ್ಚೆಯ ನಿಯಮಾವಳಿಯನ್ನು ಒಪ್ಪದೆ ಹಠಕ್ಕೆ ಬಿದ್ದು ಚರ್ಚೆ ನಡೆಯದಂತೆ ನೋಡಿಕೊಂಡರು. ನಿಜಕ್ಕೂ ಪಾರ್ಲಿಮೆಂಟಿನಲ್ಲಿ ಚರ್ಚೆ ನಡೆಯದಂತಹ ವಾತಾವರಣವನ್ನು ಅವರು ಸೃಷ್ಟಿ ಮಾಡಿದ್ದರು. ಅದೇ ಮೋದಿಗೆ ಬೇಕಾಗಿತ್ತು.
ನಮ್ಮ ಪ್ರಧಾನಿ ಮೋದಿಗೆ ಪ್ರಶ್ನೆಗೆ ಉತ್ತರಿಸುವ ಧೈರ್ಯವೇ ಇಲ್ಲವೆಂದರೂ ಸರಿಯೇ. ಪಾರ್ಲಿಮೆಂಟಿನಲ್ಲಿ ಅವರು ಎಂದಾದರೂ ಮಾತನಾಡಿದರೆ, ಅದು ಏಕಮುಖ ಭಾಷಣವೇ ಆಗಿರುತ್ತಿತ್ತು. ಈವರೆಗೆ ಅವರು ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸಿಲ್ಲ. ಸಂದರ್ಶನ ನೀಡಿದರೆ ಅವರಿಗೆ ಕೇಳಬೇಕಾದ ಪ್ರಶ್ನೆಗಳ ಸೆನ್ಸಾರ್ ಆಗುತ್ತಿದೆ. ದೊಡ್ಡ ದೊಡ್ಡ ಸಾರ್ವಜನಿಕ ಸಭೆಗಳಲ್ಲಿ, ವಿರೋಧಿ ನಾಯಕನ ಶೈಲಿಯಲ್ಲಿ ಹಾವಭಾವಗಳಿಂದ ಭಾಷಣ ಮಾಡುವುದೇ ಅವರಿಗೆ ಪ್ರಿಯ
ನವೆಂಬರ್ 8ರ ನಂತರದ ಪರಿಣಾಮ ಮೋದಿಯ ಹಲವು ಭಕ್ತರಲ್ಲಿ ನಿರಾಸೆ ಮೂಡಿಸಿದೆ  ಆದರೆ ಇಷ್ಟು ಕಾಲ ಮೋದಿಯ ಭಕ್ತರಾಗಿದ್ದವರಿಗೆ ಒಮ್ಮೆಲೆ ಅವರನ್ನು ಕೈ ಬಿಡಲಾಗುತ್ತಿಲ್ಲ  ಬಿಜೆಪಿ ನಾಯಕರಿಗೂ  ಕೇಂದ್ರದ ಮಂತ್ರಿಗಳಿಗೂ ಭಯಂಕರ ಇರಿಸು ಮುರಿಸಾಗಿದೆ  ಮರೆಯಲ್ಲಿ ಮೋದಿಯನ್ನು ದೂರುವ ವಿದ್ಯಮಾನಗಳು ಕೇಳಿ ಬರುತ್ತಿದೆ  ತಕ್ಷಣ ಎಲ್ಲವೂ ನಾರ್ಮಲ್ ಇರುವಂತೆ ಭಾಸವಾಗುತ್ತಿದೆ
ಆದರೆ ನಗದು ಹಣ ಬೇಕಾದಂತೆ ಹರಿದಾಡದೆ  ರೈತರಿಗೆ  ಕೂಲಿಕಾರರಿಗೆ  ಸಣ್ಣ ವ್ಯಾಪಾರಿಗಳಿಗೆ ಮತ್ತು ಕಿರು ಕೈಗಾರಿಕೆಗಳಿಗೆ ಆಗಿರುವ ಹೊಡೆತ ಗಂಭೀರವಾದುದು ಇದರ ಪರಿಣಾಮ ಮುಂದೆ ಗೊತ್ತಾಗಲಿದೆ  ನಾಯಕರ ಮೇಲೆ ಪರಮ ಭಕ್ತಿಯ ನಂಬಿಕೆ ಇಟ್ಟು ನಡೆದುಕೊಳ್ಳುವವರು  ವಾಸ್ತವಿಕತೆಯನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು  ಪ್ರಧಾನಿಯೇನೂ ಪವಾಡ ಪುರುಷರಲ್ಲ  ಅವರು ನಮ್ಮ ಹಾಗೆಯೇ ಯೋಚಿಸಬಲ್ಲವರು  ಅಷ್ಟೇ

  • ಟಿ ಎಂ ಕೆ ಮಂಗಳೂರು