ಐ ಎಸ್ ಐ ಮಾರ್ಕ್ ಇರುವ ಹೆಲ್ಮೆಟ್ ಕಡ್ಡಾಯ ಯಾಕೆ

ದ ಕ ಜಿಲ್ಲೆಯಲ್ಲಿ ಸಂಚಾರಿ ಪೊಲೀಸರೇ ಅಪಘಾತಕ್ಕೆ ಕಾರಣರಾಗುತ್ತಿದ್ದಾರೆಯೇ ಎಂಬ ಸಂಶಯ ಬರಲಾರಂಭಿಸಿದೆ  ಈ ಪೊಲೀಸರು ಸಂದು ಗೊಂದಿನಲ್ಲಿ  ಮರದ ಅಡಿಯಲ್ಲಿ ನಿಂತುಕೊಂಡು ವೇಗವಾಗಿ ಬರುತ್ತಿರುವ ವಾಹನಗಳನ್ನು ಕೂಡಲೇ ನಿಲ್ಲಿಸುವಂತೆ ಸೂಚಿಸುತ್ತಾರೆ  ನಿಲ್ಲಿಸುವ ವಾಹನದ ಹಿಂದೆ ಬರುವ ವಾಹನ ವೇಗವಾಗಿ ಬರುತ್ತಿರುತ್ತದೆ  ಅದು ನಿಯಂತ್ರಣಕ್ಕೆ ಬಾರದೆ ಅದೆಷ್ಟೋ ಸಲ ಡಿಕ್ಕಿ ಹೊಡೆದ ಘಟನೆಗಳು ನಡೆದಿದೆ  ಲೈಸೆನ್ಸ್  ಹೊಗೆ ತಪಾಸಣೆ  ಇನ್ಸೂರೆನ್ಸ್  ಹೆಲ್ಮೆಟ್ ಹೀಗೆ ಒಂದಲ್ಲ ಒಂದು ವಿಚಾರಿಸಿ ಎಲ್ಲಾ ದಾಖಲೆಗಳು ಸರಿಯಿದ್ದರೂ ಏನಾದರೊಂದು ನೆಪ ಹೇಳಿ ಹಣ ಮಾಡುವುದು ಮಾಮೂಲಿಯಾಗಿದೆ  ಮತ್ತೊಂದೆಡೆ ಈ ಪೊಲೀಸರು ಐ ಎಸ್ ಐ ಮಾರ್ಕ್ ಹೆಲ್ಮೆಟ್ ಕಡ್ಡಾಯ ಎನ್ನುತ್ತಾರೆ  ಇದು ಯಾಕೆ   ರಾಜ್ಯ ಸಾರಿಗೆ ಸಂಸ್ಥೆ ಮತ್ತು ಈ ಕಂಪೆನಿ ಪಾಲುದಾರಿಕೆಯಾ   ಈ ಮಾರ್ಕಿನ ಹೆಲ್ಮೆಟ್ ಧರಿಸದೇನೇ ಅದೆಷ್ಟೋ ಸಂಚಾರಿ ಪೊಲೀಸರು ತಿರುಗಾಡುತ್ತಿರುತ್ತಾರೆ  ಕೆಲವೊಮ್ಮೆ ದ್ವಿಚಕ್ರ ವಾಹನಿಗರಿಗೆ ದಂಡ ಹಾಕಿದರೂ ಹಣ ಕಟ್ಟಿದ ಸ್ವೀಕೃತಿ ರಶೀದಿ ಕೊಡುತ್ತಿಲ್ಲ ಯಾಕೆ

  • ಕೆ ನಝೀರ್ 
    ಕಸಬಾ ಬೆಂಗ್ರೆ ಮಂಗಳೂರು