ಲೋಕಸಭೆಯಲ್ಲಿ ಪ್ರಧಾನಿ ಯಾಕೆ ಹೇಳಿಕೆ ನೀಡುತ್ತಿಲ್ಲ ?

ಲೋಕಸಭೆಯಲ್ಲಿ ವಿತ್ತ ಸಚಿವ ಅರುಣ ಜೇಟ್ಲಿ ಮಾತನಾಡುವುದು ಉಢಾಪೆಯಂತೆ ತೋರುತ್ತದೆ. ಅವರಲ್ಲಿ ವಿರೋಧ ಪಕ್ಷಗಳ ಟೀಕೆ  ಸಲಹೆ ಸ್ವೀಕರಿಸುವ ತಾಳ್ಮೆಯೂ ಇಲ್ಲ. ತಾನೋರ್ವ ಮಹಾನ್ ಅರ್ಥಶಾಸ್ತ್ರಜ್ಞ ಎಂಬ ಫೋಸ್ ಕೊಡುವುದು ಖಂಡನೀಯವಾದುದು. ಲೋಕಸಭೆಯಲ್ಲಿ ಪ್ರಧಾನಿಯವರಿಗೆ ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಲೂ ಅಸಾಧ್ಯವೇ ? ಅನಂತಕುಮಾರ್ ಮತ್ತು ಜೇಟ್ಲಿಯವರು ಎಲ್ಲರನ್ನೂ ನಿಭಾಯಿಸುವ  ನೈತಿಕಶಕ್ತಿ ಪಡೆದಿಲ್ಲ. ನರೇಂದ್ರ ಮೋದಿಯವರು ಲೋಕಸಭೆ, ರಾಜ್ಯಸಭೆಯನ್ನು ಹೊರತುಪಡಿಸಿ ಸಾರ್ವಜನಿಕ ವೇದಿಕೆಗಳಲ್ಲಿ ಗಂಟೆಗಟ್ಟಲೆ `ಕಾಳಾಧನ್….ಬ್ಲಾಕ್‍ಮನಿ….’ ಎಂದೆಲ್ಲ ಬೊಬ್ಬೆ ಹಾಕುತ್ತಾರೆ. ಲೋಕಸಭೆಯ ಕಲಾಪದಲ್ಲಿ ಮಾತಾನಾಡುವ ನೈತಿಕತೆ ಯಾಕಿಲ್ಲ . ಭಾರತದ ಜನಜೀವನ ಮತ್ತು ಶ್ರೀ ಸಾಮಾನ್ಯರ ಬದುಕಿನ ನೈಜ ಚಿತ್ರಣ ಗೊತ್ತಿರದ ಜೇಟ್ಲಿ ಅಹಂಕಾರದಿಂದ ಪ್ರತಿಪಕ್ಷಗಳನ್ನು ಟೀಕಿಸುವುದಕ್ಕೆ ಕಡಿವಾಣ ಬೀಳಬೇಕಿದೆ.
ಲಾಲ್‍ಕೃಷ್ಣ ಅಡ್ವಾಣಿಯವರು ಸ್ಪೀಕರ್ ಸುಮಿತ್ರಾ ಮಹಾಜನ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರಗೆ ಚಾಟಿ ಬೀಸಿದ್ದಾರೆ. ಆರ್ ಎಸ್ ಎಸ್ ಮುಖ್ಯಸ್ಥರು, ಅರುಣ್ ಶೌರಿಯಂತಹ ವ್ಯರ್ಥಶಾಸ್ತ್ರಜ್ಞರು ನೋಟು ರದ್ದು ಮಾಡಿರುವುದು ಹುನ್ನಾರ ಮತ್ತು ಅಸಂವಿಧಾನಾತ್ಮಕ ನಡೆವಳಿಕೆ ಎನ್ನುತ್ತಿದ್ದಾರೆ.
ಸ್ವಂತ ದುಡಿಮೆಯ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇರಿಸಿದವರಿಗೆ ಹಣ ಮರುಪಡೆಯಲು ನಿರ್ಬಂಧ ಹೇರುವ ದುಸ್ಸಾಹಸಕ್ಕೆ ಮೋದಿ, ಜೇಟ್ಲಿ, ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಕೈ ಹಾಕಿರುವುದಂತೂ ಸ್ವಾತಂತ್ರ್ಯಹರಣ  ಹೇಯಕೃತ್ಯವಾಗಿದೆ. ಕ್ಯಾಶಲೆಸ್ ವ್ಯವಹಾರವನ್ನು ಆರಂಭಿಸಲು ಭಾರತ ದೇಶ ಇನ್ನು ಅಂಬೆಗಾಲು ಹರೆಯದಲ್ಲಿದೆ. ದೇಶದ ನಗದು ವ್ಯವಹಾರವನ್ನು ನಿಷೇಧಿಸಲು  ಒತ್ತಡ ಹೇರಲು ಕೇಂದ್ರ ಅಥವಾ ರಾಜ್ಯ ಸರಕಾರಗಳಿಗೆ ಅಧಿಕಾರವೇ ಇಲ್ಲ. ನೋಟು ರದ್ದತಿ ಆದ ಬಳಿಕ ಕಪ್ಪು ಹಣ ಎಷ್ಟು ವಸೂಲಾಗಿದೆ ? 500 ರೂಪಾಯಿ ಮುಖಬೆಲೆಯ ನೋಟು ಯಾಕೆ ಸಿಗುತ್ತಿಲ್ಲ ? ಕೋಟಿ ಕೋಟಿ 2000 ರೂಪಾಯಿ ಮುಖಬೆಲೆಯ ನೋಟು ಯಾರಿಗೆ ಸೇರುತ್ತಿದೆ ? ತಾಸುಗಟ್ಟಲೆ ಎಟಿಎಂ ಅಥವಾ ಬ್ಯಾಂಕ್ ಎದುರು ಸರದಿ ಸಾಲು ನಿಂತುಕೊಳ್ಳುವಂತೆ ಮಾಡಿದ ಬಿಜೆಪಿ ಮತ್ತು ಎನ್ ಡಿ ಎ ಸರಕಾರ ಮತದಾರರ ಆಕ್ರೋಶಕ್ಕೆ ಗುರಿಯಾಗಿದ್ದಂತೂ ಅಕ್ಷರಶ ಸತ್ಯ. ಅಕ್ರಮ ಆಸ್ತಿ, ಬಂಗಾರ, ಬೆಳ್ಳಿ, ನಗದು ಹಣ ವಶಪಡಿಸಿದ ಆದಾಯ ತೆರಿಗೆ ಅಧಿಕಾರಿಗಳು ಇಷ್ಟು ವರ್ಷಗಳ ಕಾಲ ಯಾಕೆ ಇಂತಹ ದಾಳಿ, ತನಿಖೆ, ದಸ್ತಗಿರಿ ಕ್ರಮವನ್ನು ದೇಶದಾದ್ಯಂತ ಕೈಗೊಂಡಿಲ್ಲ ? ಹಣವನ್ನು ಪ್ಲಾಸ್ಟಿಕ್‍ಗೆ ಪರಿವರ್ತಿಸುತ್ತಿರುವುದು ತುಘಲಕಶಾಹಿ.

  • ಪುತ್ತೂರು ಕೆ ಪರಮೇಶ್ವರ