ಸಂಸದನಿಂದ ಪೆಟ್ಟು ತಿಂದ ವೈದ್ಯರು ದೂರು ಕೊಡಲು ಹಿಂಜರಿಯುವುದೇಕೆ

ಉತ್ತರ ಕನ್ನಡ ಬಿಜೆಪಿ ಸಂಸದ ತಮ್ಮ ಜವಾಬ್ದಾರಿ ಮರೆತು ತಾಯಿಗೆ ಚಿಕಿತ್ಸೆ ಕೊಡಿಸುವ ವಿಷಯದಲ್ಲಿ ರಂಪಾಟ ನಡೆಸಿ ಆಸ್ಪತ್ರೆ ವೈದ್ಯರ ಮೇಲೆ ಹಲ್ಲೆ ನಡೆಸುತ್ತಾರೆ  ಸಂಸದರ ಈ ಸಾಧನೆ ಸೀಸಿಟೀವಿಯಲ್ಲಿ ಸೆರೆಯಾಗುತ್ತದೆ  ಆದರೂ ಯಾವುದೇ ದೂರು ದಾಖಲಾಗುವುದಿಲ್ಲ
ಅದೇ ರೀತಿ ಬೆಂಗಳೂರಿನಲ್ಲಿ ನಡುರಾತ್ರಿ ಯುವತಿಯೊಬ್ಬಳ ಮೇಲೆ ಯುವಕರಿಬ್ಬರು ನಿರ್ಭಯವಾಗಿ ಲೈಂಗಿಕ ಕಿರುಕುಳ ನೀಡಿ ಅನುಚಿತವಾಗಿ ವರ್ತಿಸುತ್ತಾರೆ  ಮನುಷ್ಯತ್ವ ಮರೆತ ಕೆಲ ಬೈಕ್ ಸವಾರರು ಈ ಘಟನೆಯನ್ನು ನೋಡಿಯೂ ನೋಡದಂತೆ ಸುಮ್ಮನಾಗುತ್ತಾರೆ  ಎಲ್ಲವೂ ಕೆಮರಾದಲ್ಲಿ ದಾಖಲಾಗುತ್ತದೆ  ನಂತರವೂ ಆಕೆ ಪೊಲೀಸರಿಗೆ ಯಾವುದೇ ದೂರು ಕೊಡುವ ಗೋಜಿಗೆ ಹೋಗುವುದಿಲ್ಲ  ಇಂಥ ಪ್ರಕರಣಗಳಲ್ಲಿ ಪ್ರತ್ಯಕ್ಷ ದಾಖಲೆಗಳಿದ್ದರೂ ಸಂತ್ರಸ್ತರು ದೂರು ಕೊಡದಿರುವುದು ವಿಪರ್ಯಾಸ

  • ಎಂ ಸುಜನ್ ಸುವರ್ಣ  ಶಕ್ತಿನಗರ