ಸೂತಕದ ಮನೆಯಲ್ಲಿ ಸಂದರ್ಶನ ಅಗತ್ಯವೇ

ದುಷ್ಕರ್ಮಿಗಳಿಂದ ಕೊಲೆಗೀಡಾಗಿ ಮಗನನ್ನು ಕಳೆದುಕೊಂಡು ದುಃಖದಲ್ಲಿದ್ದ ತಾಯಿಯನ್ನು ಮಾಧ್ಯಮಗಳು ಸಂದರ್ಶನ ಮಾಡುತ್ತಿದ್ದ ರೀತಿ ಕಂಡಾಗ ಬೇಸರವಾಯಿತು. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ತಾಯಿಯನ್ನು ಈ ರೀತಿ ಸಂದರ್ಶಸಿ ಹಿಂಸೆ ನೀಡುವುದು ಅಮಾನವೀಯ ಆ ತಾಯಿಗೆ ಪ್ರಶ್ನೆಯ ಮೇಲೆ ಪ್ರಶ್ನೆಯನ್ನು ಕೇಳಿ ಉಸಿರು ಕಟ್ಟುವ ಸ್ಥಿತಿ ನಿರ್ಮಾಣವಾಗಿತ್ತು ಮಗನನ್ನು ಕಳೆದುಕೊಂಡು ನೊಂದಿರುವ ಮಹಿಳೆಗೆ ಆ ಕ್ಷಣ ಬೇಕಿರುವುದು ಶಾಂತವಾದ ವಾತಾವರಣ ಸಾಂತ್ವನ ವಿಶ್ರಾಂತಿ ಮತ್ತೊಮ್ಮೆ ಕೆಟ್ಟ ಕ್ಷಣಗಳನ್ನು ನೆನಪಿಸುವ ಪ್ರಶ್ನೆ ಕೇಳುವುದು ಸರಿಯಲ್ಲ ಸುದ್ದಿಯನ್ನು ನಾವೇ ಮೊದಲು ಪ್ರಸಾರ ಮಾಡುವ ಧಾವಂತದಲ್ಲಿ ಹಿಂಸೆ ಕೊಡುವುದು ಖಂಡಿತಾ ಸರಿಯಲ್ಲ ಈ ಬಗ್ಗೆ ಮಾಧ್ಯಮಗಳು ಆತ್ಮವಿಮರ್ಶೆ ಮಾಡಿಕೊಳ್ಳುವುದು ಉತ್ತಮ

  • ಹರ್ಷರಾಜ್ ಶೆಟ್ಟಿ  ಜಿ ಎಂ ಮುಲ್ಕಿ

LEAVE A REPLY