ಇಂದ್ರಜಿತ್ ಲಂಕೇಶರಿಗೆ ಅದೇಕೆ ಸಿಬಿಐ ಮೇಲೆ ಅಷ್ಟೊಂದು ಪ್ರೀತಿ

ಗೌರಿ ಲಂಕೇಶ್ ಹತ್ಯೆ ತನಿಖೆಯನ್ನು ಸಿಬಿಐಗೊಪ್ಪಿಸಬೇಕೆಂದೂ ಸದ್ಯ ಅದರ ತನಿಖೆಯನ್ನು ಮಾಡುತ್ತಿರುವ ರಾಜ್ಯ ಪೊಲೀಸ್ ಇಲಾಖೆಯ ಮೇಲೆ ತನಗೆ ನಂಬಿಕೆಯಿಲ್ಲವೆಂದೂ ಗೌರಿಯವರ ತಮ್ಮ ಇಂದ್ರಜಿತ್ ಹೇಳುತ್ತಿರುವುದನ್ನು ನೋಡುವುದನ್ನು ಕಂಡು ತುಂಬಾ ಕಸಿವಿಸಿಯಾಗುತ್ತಿದೆ ಇಂದ್ರಜಿತಗೆ ಸಿಬಿಐ ಮೇಲೆ ಅದೇಕೆ ಅಂಥ ಭರವಸೆ ಆ ಸಂಸ್ಥೆ ಅಂದಂದು ಕೇಂದ್ರದಲ್ಲಿ ಆಡಳಿತದಲ್ಲಿರುವ ಸರಕಾರ ಮತ್ತು ಪಕ್ಷಗಳು ಹೇಳಿದಂತೆ ಕೇಳುತ್ತದೆಯೆ ಹೊರತು ಸ್ವತಂತ್ರವಾದ ತನಿಖೆಯನ್ನು ಕೈಗೊಳ್ಳುವುದಿಲ್ಲ ಅನ್ನುವುದು ಮತ್ತೆ ಮತ್ತೆ ಸಾಬೀತಾಗಿದೆ ಈ ವಿಷಯ ಸ್ವತಃ ಇಂದ್ರಜಿತಗೆ ತಿಳಿಯದೇ ಸಂಗತಿಯೇನಲ್ಲ. ಮೇಲಾಗಿ ಈಗ ಸದ್ಯದಲ್ಲಿಯಂತೂ ಕೇಂದ್ರದಲ್ಲಿ ಅಧಿಕಾರದಲ್ಲಿರುವುದು ಯಾವ ವಿಚಾರಧಾರೆ ಮತ್ತು ಶಕ್ತಿಗಳ ವಿರುದ್ಧ ಗೌರಿಯವರು ಹೋರಾಡುತ್ತ ಬಂದಿದ್ದರೋ ಅದೇ ವಿಚಾರಧಾರೆಯ ಪ್ರತಿಪಾದಕರು ಮತ್ತು ಅದೇ ಶಕ್ತಿಗಳು ಅಲ್ಲವೇ ಹೀಗಿರುವಾಗ ಇಂದ್ರಜಿತ್ ಈ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಹೇಳುತ್ತಿರುವುದು ನಿಜಕ್ಕೂ ವಿಚಿತ್ರವೇ ಸರಿ

  • ಅವಿನಾಶ್ ಸುವರ್ಣ  ಉರ್ವಾಸ್ಟೋರ್  ಮಂಗಳೂರು