ಯಾವ ಸಾಧನೆಗೆ ಕೆಡಿಪಿ ಸಭೆ ?

ಕೆಡಿಪಿ ತ್ರೈಮಾಸಿಕ ಸಭೆ ಇತ್ತೀಚೆಗೆ ಪುತ್ತೂರಿನಲ್ಲಿ ನಡೆಯಿತು ಶಾಸಕಿ ರಾಜ್ಯದಲ್ಲಿಯೇ ಇಲ್ಲದ ಖಾತೆ ಸಮಸ್ಯೆ ಬಗ್ಗೆ ಇದಕ್ಕೆ ಯಾರು ಕಾರಣ ಅವರ ಮೇಲೆ ಕಾನೂನು ಎಂದಿದ್ದಾರೆ ಇದನ್ನು ಮಾಡಿದ್ದು ನಗರಾಭಿವೃದ್ಧಿ ಇಲಾಖೆಯ ಆಯುಕ್ತರು ಎಂಬುದು ಶಾಸಕಿಗೆ ಗೊತ್ತಿಲ್ಲವೇ  ರಮಾನಾಥ ರೈ ಬಂದಾಗ ಕೊಟ್ಟ ಮನವಿ ಎಲ್ಲಿ ಕಸದ ಬುಟ್ಟಿ ಸೇರಿದೆ  ಅವರು ಬಂಟ್ವಾಳದ ಗಲಭೆಯಲ್ಲಿ ಒತ್ತಡದಲ್ಲಿದ್ದಾರೆ  ಇಲ್ಲಿ ನಗರಸಭೆಯಲ್ಲಿ 400ಕ್ಕಿಂತ ಹೆಚ್ಚು ಕಡತಗಳು ಬಿದ್ದು ನರಳಾಡುತ್ತಿದೆ ಜನರ ಪಾಡು ನಾಯಿಪಾಡಾಗಿದೆ ಶಾಸಕಿಯವರು ಈ ಖಾತೆಗಳಿಗೆ ಸಂಬಂಧಪಟ್ಟ ಇಲಾಖೆಗಳಲ್ಲಿ ಮಾತನಾಡುವುದು ಬಿಟ್ಟು ಕೆಡಿಪಿ ಸಭೆಯಲ್ಲಿ ಕಾನೂನು ಕ್ರಮವೆಂದು ಪತ್ರಿಕೆಯಲ್ಲಿ ಹೇಳಿಕೆ ನೀಡುವುದು ಯಾವ ನ್ಯಾಯ  ಶಾಸಕಿಯವರೇ ನೀವು ಕೂಡಲೇ ಈ ಖಾತೆಯ ಭೂತವನ್ನು ನಿವಾರಿಸಿ ಬಿಸಾಡಿ ಇದೇ ನೀವು ಪುತ್ತೂರಿನವರಿಗೆ ಮಾಡುವ ಉಪಕಾರ

  • ಎಸ್ ಮಹಾಲಿಂಗ  ಪುತ್ತೂರು