ವಿಟ್ಲ ಜೇಸೀ ಶಾಲೆ ಹೀಗೇಕೆ

ವಿಟ್ಲದ ಜೇಸೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹತ್ತನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ರಜೆಯ ದಿನಗಳಲ್ಲಿ ನಡೆಯುತ್ತಿದೆ. ಬರುವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾ ಂಕ್ ಪಡೆದು ಶಾಲೆಗೆ ಹೆಸರು ಬರಲು ಪ್ರತಿ ವಿದ್ಯಾರ್ಥಿಯಿಂದ ರೂಪಾಯಿ 2,500 ಫೀಸ್ ಪಡೆದು ಅವರ ರಜಾ ದಿನದ ಸವಿಯನ್ನು ಕಸಿಯಲಾಗಿದೆ. ವರ್ಷವಿಡೀ ಕಲಿತು ರಜೆಯಲ್ಲಿ ಪ್ರವಾಸ, ಸಂಬಂಧಿಕರ ಮನೆಗೆ ಹೋಗಬೇಕೆಂದು ಬಯಸಿದ್ದ ಮಕ್ಕಳು ಶಾಲೆಯ ಈ ರಾ ಂಕ್ ವ್ಯಾಮೋಹಕ್ಕೆ ಬಲಿಯಾಗಿ ಹಿಂಸೆ ಅನುಭವಿಸುತ್ತಿದ್ದಾರೆ  ಮಕ್ಕಳ ಪಠ್ಯೇತರ ಚಟುವಟಿಕೆಯನ್ನು ಕಸಿದು ಅವರನ್ನು ರ್ಯಾಂಕ್ ವಿದ್ಯಾರ್ಥಿಗಳನ್ನಾಗಿ ಮಾಡಿ ಶಾಲೆಯ ಕೀರ್ತಿಗೆ ಆಸೆ ಪಡುವ ಈ ಶಾಲೆಯನ್ನು ಕೇಳುವವರಿಲ್ಲವೇ

  • ನೊಂದ ಹೆತ್ತವರು  ವಿಟ್ಲ ಬಂಟ್ವಾಳ