ಬೋರ್ವೆಲ್ ನಿಷೇಧ ಆದೇಶದಿಂದ ಜಿಲ್ಲೆಗೆ ವಿನಾಯಿತಿ ಏಕೆ ಬೇಕು

ರಾಜ್ಯದಲ್ಲಿ ಬೋರ್ವೆಲ್ ನಿಷೇಧಕ್ಕೆ ರಾಜ್ಯ ಸರ್ಕಾರ ಆದೇಶಿಸಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯನ್ನು ಬೋರ್ವೆಲ್ ಆದೇಶದಿಂದ ಮುಕ್ತಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಇದನ್ನು ಗಮನಿಸಿದರೆ ಡೀಸಿ ಧನಿಕರ ತಾಳಕ್ಕೆ ತಕ್ಕ ಕುಣಿಯುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಹಾಹಾಕಾರ ತಾಂಡವಾಡುತ್ತಿದ್ದರೂ ನೀರಿನ ಬರಗಾಲವಿಲ್ಲ ಎಂದು ಡಈಸಿ ಹೇಳಿಕೆ ನೀಡಿದ್ದಾರೆ. ನೀರಿನ ಬರಗಾಲದ ಕಷ್ಟ ಅನುಭವಿಸದವರು ಕೇವಲ ಧನಿಕರು ಮಾತ್ರ. ಕಾರಣ ಅವರು ಬೋರ್ವೆಲ್ ತೋಡಿಕೊಂಡಿದ್ದಾರೆ. ಒಬ್ಬ ಧನಿಕ ಬೋರ್ವೆಲ್ ಕೊರೆದು ಸುತ್ತಮುತ್ತಲಿನ ಹತ್ತು ಮಂದಿ ಬಡವರ ಬಾವಿ ಕೆರೆಗಳಲ್ಲಿ ನೀರಿಲ್ಲದಂತೆ ಮಾಡುತ್ತಿದ್ದಾನೆ.
ಒಬ್ಬ ಶ್ರೀಮಂತ ತನ್ನ ತೋಟಕ್ಕೆ ನೀರು ಹಾಕಲು ಬೋರ್ವೆಲ್ ತೋಡಿಸಿಕೊಂಡರೆ ಸುತ್ತಮುತ್ತಲಿನ ಬಡವರ ಮನೆಯ ಕೆರೆ ಬಾವಿಗಳ ನೀರು ಆವಿಯಾಗುತ್ತದೆ. ಅತ್ತ ತನ್ನ ತೋಟಕ್ಕೆ ನೀರೂ ಇಲ್ಲ ಇತ್ತ ಕುಡಿಯಲೂ ಇಲ್ಲ ಎಂಬಂತೆ ತಲೆಗೆ ಕೈ ಹೊತ್ತು ಕೂರಬೇಕಾದ ಪರಿಸ್ಥಿತಿ ಆತನಿಗೆ ಎದುರಾಗುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗುತ್ತಿರುವ ಪರಿಸ್ಥಿತಿ ಇದೇ ಆಗಿದೆ. ಹಾಗಾಗಿ ಬೋರ್ವೆಲ್ ನಿಷೇಧದಿಂದ ಜಿಲ್ಲೆಯನ್ನು ಮುಕ್ತಗೊಳಿಸಬಾರದು. ಜಿಲ್ಲಾಧಿಕಾರಿಗಳು ಗಾಳಿಬಂದ ಕಡೆ ವಾಲುವ ಬುದ್ದಿಯನ್ನು ನಿಲ್ಲಿಸಬೇಕು. ಬೋರ್ವೆಲ್ ಕೊರೆಯುವಿಕೆಯಿಂದ ಅಂತರ್ಜಲದ ಮೇಲೆ ಉಂಟಾಗಬಹುದಾದ ತೊಂದರೆಗಳ ಬಗ್ಗೆ ಚಿಂತಿಸಲಿ. ತಜ್ಞರ ಸಲಹೆ ಪಡೆಯಲಿ

  • ಐ ಎನ್ ಕೆ  ಮಂಗಳೂರು