ಬಿಜೆಪಿ `ಸಂಭ್ರಮ ದಿನ’ ಯಾಕಾಗಿ ಆಚರಿಸಿತು ?

ನೋಟು ರದ್ದತಿ ವಿರುದ್ಧ ವಿರೋಧ ಪಕ್ಷಗಳು ಆಚರಿಸಿದ ಆಕ್ರೋಶ ದಿನಕ್ಕೆ ಪರ್ಯಾಯವಾಗಿ ಬಿಜೆಪಿ ಸಂಭ್ರಮದ ದಿನವನ್ನು ಯಾಕಾಗಿ ಆಚರಿಸಿರಬಹುದು ? ನೋಟು ವಿನಿಯಮಕ್ಕಾಗಿ ಹೋದ 70ಕ್ಕೂ ಹೆಚ್ಚು ಮಂದಿ ಸತ್ತದ್ದಕ್ಕಾಗಿ ಸಂಭ್ರಮವೇ ? ಕೋಟ್ಯಂತರ ಜನ ತಮ್ಮ ದೈನಂದಿನ ಖರ್ಚು ವೆಚ್ಚಗಳಿಗೆ ಪರದಾಡುತ್ತಿರುವುದಕ್ಕೆ ಸಂಭ್ರಮವೇ ? ಕೆಲವು ಬಹುರಾಷ್ಟ್ರೀಯ ಆನ್‍ಲೈನ್ ಕಂಪೆನಿಗಳಿಗೆ ಕ್ಯಾಶ್‍ಲೆಸ್ ವ್ಯವಹಾರದ ಹೆಸರಿನಲ್ಲಿ ಲಾಭ ಮಾಡಿಕೊಟ್ಟಿದ್ದಕ್ಕೆ ಇರಬಹುದೇ ? ದೊಡ್ಡವರಿಗೆ ಸಾಲ ನೀಡಿ ಪಾಪರ್ ಆಗಿದ್ದ ಬ್ಯಾಂಕುಗಳಿಗೆ ಬಡವರ ಬೆವರಿನ ಹಣ ತುಂಬಿಸಿದ್ದಕ್ಕೆ ಸಂಭ್ರಮವೇ ? ಮೋದಿಯವರ ಆಡಳಿತ ವೈಫಲ್ಯ ಮುಚ್ಚಿ ಹಾಕಿದ್ದಕ್ಕೆ ಅಥವಾ ಉತ್ತರಪ್ರದೇಶ ಚುನಾವಣೆಗೆ ಹೊಸ ಅಸ್ತ್ರ ಸಿಕ್ಕಿರುವುದಕ್ಕೆ ಸಂತೋಷವೇ ? ಜನರ ಗಮನ ನೈಜ ಸಮಸ್ಯೆಗಳಿಂದ ಬೇರೆಡೆ ಸೆಳೆದದ್ದಕ್ಕೆ ಸಂಭ್ರಮವೇ ? ತಿಳಿಯದು.

  • ನವೀನ್ ಕೋಟ್ಯಾನ್, ಉಪ್ಪಳ