ಮಠಗಳು ಸರಕಾರದ ಅಧೀನಕ್ಕೆ ಒಳಪಡಲು ಹಿಂಜರಿಕೆ ಯಾಕೆ

ರಾಜ್ಯ ಸರಕಾರ ಮಠಗಳನ್ನು ಸರಕಾರದ ಅಧೀನಕ್ಕೆ ಒಳಪಡಿಸಲು ಮುಂದಾಗಿದ್ದು ಇದಕ್ಕೆ ಅನೇಕರು ಮಿಶ್ರ ಪತ್ರಿಕ್ರಿಯೆ ನೀಡಿದ್ದರು ವಿವಾದದ ಸುಳಿಯಲ್ಲಿ ಸಿಲುಕಿದ್ದ ರಾಜ್ಯ ಸರಕಾರ ಬಳಿಕ ಜನರ ಅಭಿಪ್ರಾಯಕ್ಕೆ ಕಿವಿಯೊಡ್ಡಿದೆ ದೇಶದ ಉದ್ಧಾರ ಗುಡಿ ಗೋಪುರ ಮಠ-ಮಂದಿರಗಳಿಂದ ಸಾಧ್ಯವಿಲ್ಲ ಇವು ಜನರಲ್ಲಿ ಕೋಮುವಾದ ಜಾತಿವಾದದ ಸ್ವಾರ್ಥವನ್ನು ಬಿತ್ತಿ ಸಂವಿಧಾನದ ಸ್ವಾತಂತ್ರ್ಯ ಸಮಾನತೆ ಸಹೋದರತೆ ಮರೆಮಾಚುತ್ತಿವೆ ಮುಜರಾಯಿ ಇಲಾಖೆಯಿಂದ ಮಾಸಿಕ ವೇತನ ನೀಡುವುದರಿಂದ ಎಲ್ಲಾ ದೇವಾಲಯಗಳಿಗೂ ಎಲ್ಲಾ ಜನಾಂಗದ ಅರ್ಚಕರನ್ನು ನೇಮಿಸುವಂತಾಗಬೇಕಿದೆ ಏಕೆಂದರೆ ಇದು ಸರಕಾರಿ ಸ್ವತ್ತು ಆಗಿರುವುದರಿಂದ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಿಕೊಡಬೇಕಿದೆ ಪೂಜಾ ವಿಧಿ ವಿಧಾನ ಕೇವಲ ಒಂದು ವರ್ಗಕ್ಕೆ ಸೀಮಿತಗೊಂಡು ಅದು ವಂಶಪಾರಂಪರ್ಯವಾಗಿ ಬೆಳೆಯುತ್ತಿರುವುದು ದುರಂತವೇ ಸರಿ ಸರಕಾರದ ಸೌಲಭ್ಯಗಳನ್ನು ಪಡೆಯುತ್ತಿರುವ ಮಠಗಳು ಸರಕಾರದ ಅಧೀನಕ್ಕೆ ಒಳಪಡಲು ಏಕೆ ಹಿಂಜರಿಯುತ್ತಿವೆ ಎಂಬುದನ್ನು ಎಲ್ಲರಿಗೂ ತಿಳಿಸಿಕೊಡಬೇಕಿದೆ ಮಠ ಮಾನ್ಯಗಳು ರಾಜಕೀಯ ಪಕ್ಷಗಳ ಮತ ಬ್ಯಾಂಕಾಗಿ ಕಪ್ಪುಹಣ ಸಂಗ್ರಹದ ಖಜಾನೆಗಳಾಗಿ ತಮ್ಮ ಸ್ವಾರ್ಥಕ್ಕೆ ಅಧಿಕಾರವನ್ನು ಬಳಸಿಕೊಳ್ಳುತ್ತಿವೆ ಆದ್ದರಿಂದ ಇವುಗಳನ್ನು ಧಾರ್ಮಿಕ ದತ್ತಿ ಕಾಯ್ದೆಯಡಿ ಸೇರಿಸುವುದು ಸಮಂಜಸವಾಗಿದೆ

  • ಜಿತೇಶ್ ಕೋಟ್ಯಾನ್  ಕುದ್ರೋಳಿ ಮಂಗಳೂರು

LEAVE A REPLY