ಮೊಬೈಲ್ ಫೋನ್ ಮೇಲೆ ಕಸ್ಟಮ್ಸ್ ಸುಂಕ ಹೆಚ್ಚಿಸಿದ್ದೇಕೆ ?

2018-19ರ ಕೇಂದ್ರ ಬಜೆಟಿನಲ್ಲಿ ಮೊಬೈಲ್ ಫೋನ್ ಮೇಲೆ ಕಸ್ಟಮ್ಸ್ ಸುಂಕವನ್ನು ಹೆಚ್ಚಿಸಿರುವ ಸರ್ಕಾರದ ನಿರ್ಧಾರದ ಹಿಂದೆ ಆಪಲ್ ಕಂಪನಿಯ ಹಿತಾಸಕ್ತಿ ಅಡಗಿರುವುದು ಸ್ಪಷ್ಟವಾಗಿದೆ. ಕಳೆದ ಎರಡು ತಿಂಗಳಲ್ಲಿ ಎರಡನೆಯ ಬಾರಿ ವಿತ್ತ ಸಚಿವ ಅರುಣ್ ಜೈಟ್ಲಿ ಮೊಬೈಲ್ ಫೋನ್ ಮೇಲೆ ಕಸ್ಟಮ್ಸ್ ಸುಂಕವನ್ನು ಹೆಚ್ಚಿಸಿದ್ದಾರೆ. ಮೊದಲು ಶೇ 10 ರಿಂದ  15ಕ್ಕೆ ಏರಿಸಿ ಇದೀಗ ಶೇ 20ಕ್ಕೆ ಹೆಚ್ಚಿಸಿದ್ದಾರೆ.

ಬಜೆಟಿನಲ್ಲಿ ಘೋಷಿಸಿರುವ 45 ಉತ್ಪನ್ನಗಳ ಮೇಲೆ ಕಸ್ಟಮ್ಸ್ ಸುಂಕ ಹೆಚ್ಚಿಸುವ  ಹಣಕಾಸು ಸಚಿವರ ನಿರ್ಧಾರಕ್ಕೆ ಪ್ರಧಾನಿ ಮೋದಿ ಅನುಮತಿ ಪಡೆಯಲು ಆದಾಯ ಇಲಾಖೆ ಹರಸಾಹಸ ಮಾಡಿದೆ ಎಂದು ತಿಳಿದುಬಂದಿದೆ.

ಆಪಲ್ ಕಂಪನಿಯ ಮೊಬೈಲ್ ಫೋನ್ ಆಮದು ಹೆಚ್ಚಾಗುತ್ತಿದ್ದು ಮೊಬೈಲ್ ಬೆಲೆಯನ್ನು ಹೆಚ್ಚಿಸಿದರೆ ಕಂಪನಿ ಭಾರತದಲ್ಲೇ ಉತ್ಪಾದನೆ ಆರಂಭಿಸಬಹುದು ಎಂಬ ನಿರೀಕ್ಷೆಯಿಂದ ಸುಂಕ ಹೆಚ್ಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸ್ಮಾರ್ಟ್ ವಾಚುಗಳು ಮತ್ತು ಇತರ ಧರಿಸುವ ಉಪಕರಣಗಳ ಮೇಲಿನ ಸುಂಕವನ್ನು ಶೇ 20ಕ್ಕೆ ಹೆಚ್ಚಿಸಿ ದ್ವಿಗುಣಗೊಳಿಸಲಾಗಿದೆ. ಭಾರತದಲ್ಲಿ ಆಪಲ್ ಮೊಬೈಲ್ ಫೋನ್ ತಯಾರಿಸಲು ಅನುಮತಿ ನೀಡುವಂತೆ ಫಾಕ್ಸ್‍ಕಾನ್ ಕಂಪನಿ ಭಾರತ ಸರ್ಕಾರಕ್ಕೆ ದುಂಬಾಲು ಬಿದ್ದಿದೆ. ಚೆನ್ನೈ ಮತ್ತು ಶ್ರೀ ಸಿಟಿಯಲ್ಲಿ ತನ್ನ ಕಾರ್ಖಾನೆಗಳನ್ನು ಹೊಂದಿರುವ ಫಾಕ್ಸ್‍ಕಾನ್ ಕಂಪನಿ ಇಲ್ಲಿ ಕ್ಷಿಯೋಮಿ, ಜಿಯೋನಿ ಮತ್ತು ಓಪ್ಪೋ ಫೋನ್ ತಯಾರಿಸುತ್ತದೆ. ಭಾರತದಲ್ಲಿ ಚಿಲ್ಲರೆ ಮಳಿಗೆಯನ್ನು ಅರಂಭಿಸಲು ಆಪಲ್ ಉತ್ಸುಕವಾಗಿದ್ದರೂ ಶೇ 30ರಷ್ಟು ಸ್ಥಳೀಯ ಹೂಡಿಕೆಯ ನಿಯಮವನ್ನು ವಿರೋಧಿಸುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಶೇ 49ರಷ್ಟು ಬಂಡವಾಳ ಹೊಂದಿರುವ ಕಂಪನಿಗಳಿಗೆ ಸರ್ಕಾರ ಅನಿರ್ಬಂಧಿತ ಪ್ರವೇಶ ನೀಡಿದೆ.

LEAVE A REPLY