ವಿಟ್ಲಪಿಂಡಿ ವೇಳೆ ಡ್ರೋಣ್ ಕ್ಯಾಮರಾಕ್ಕೆ ಪೊಲೀಸ್ ಅವಕಾಶ ನೀಡಿದ್ದು ಸರಿಯೇ ?

ನಮ್ಮ ಪ್ರತಿನಿಧಿ ವರದಿ

ಉಡುಪಿ : ಗುರುವಾರ ರಥಬೀದಿಯಲ್ಲಿ ನಡೆದ ವಿಟ್ಲಪಿಂಡಿ ವೇಳೆ ಆಕಾಶದಲ್ಲಿ ಹಾರಾಡುತ್ತಿದ್ದ ಡ್ರೋಣ್ ಕ್ಯಾಮರಾ ವ್ಯಕ್ತಿಯೊಬ್ಬರ ಮೇಲೆ ಬಿದ್ದು ಗಂಭೀರ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿ, ಉಡುಪಿಯ ಮಠವೊಂದಕ್ಕೆ ಸಹಿತ ಮೂವರು ಖಾಸಗಿ ವ್ಯಕ್ತಿಗಳಿಗೆ ಡ್ರೋಣ್ ಕ್ಯಾಮರಾ ಬಳಸಲು ಅನುಮತಿ ನೀಡಿದ್ದೇನೆ. ವ್ಯಕ್ತಿಯೊಬ್ಬರ ಮೇಲೆ ಬಿದ್ದ ಡ್ರೋಣ್ ಕ್ಯಾಮರಾ ಪೊಲೀಸ್ ಇಲಾಖೆಯದ್ದಲ್ಲ. ಗಂಭೀರ ಗಾಯಗೊಂಡ ವ್ಯಕ್ತಿ ದೂರು ನೀಡಿಲ್ಲ. ಈ ಬಗ್ಗೆ ತನಿಖೆ ನಡೆಸುವಂತೆ ಉಡುಪಿ ನಗರದ ಇನಸ್ಪೆಕ್ಟರ್ ನವೀನ್ ಜೋಗಿಯವರಿಗೆ ತಿಳಿಸಿದ್ದೇನೆ ಎಂದು ಉಡುಪಿ ಎಸ್ಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.

ಯಾವುದೇ ತೆರೆದ ಸಮಾವೇಶ, ಸಾರ್ವಜನಿಕ ಸಮಾರಂಭಕ್ಕೆ ಪೊಲೀಸ್ ಇಲಾಖೆಯು ಖಾಸಗಿಯವರಿಗೆ ಡ್ರೋಣ್ ಕ್ಯಾಮರಾ ಬಳಸಲು ಅನುಮತಿ ನೀಡುವಂತಿಲ್ಲ. ಯಾಕೆಂದರೆ ಖಾಸಗಿ ವ್ಯಕ್ತಿಗಳು ಡ್ರೋಣ್ ಕ್ಯಾಮರಾದಲ್ಲಿ ಬಾಂಬ್ ಸಹಿತ ಇನ್ನಿತರ ಆಸ್ತಿ-ಪಾಸ್ತಿ ಹಾನಿಗೈಯ್ಯುವ ವಸ್ತುಗಳನ್ನು

ಬಳಸಲು ಸಾಧ್ಯವಿದೆ. ಹಾಗಾಗಿ ಉಡುಪಿ ಎಸ್ಪಿಯವರು ಸಾವಿರಾರು ಭಕ್ತಾಧಿಗಳು ಸೇರುವ  ವಿಟ್ಲಪಿಂಡಿಯಲ್ಲಿ ಖಾಸಗಿಯಾಗಿ ಮೂವರು ವ್ಯಕ್ತಿಗಳಿಗೆ ಡ್ರೋಣ್ ಕ್ಯಾಮರಾ ಬಳಸಲು ಅನುಮತಿ ನೀಡಿರುವುದು ಪ್ರಶ್ನಾರ್ಹವಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ.