ಸೀಎಂ ಉಡುಪಿ ಮಠಕ್ಕೆ ಯಾಕೆ ಬರುತ್ತಿಲ್ಲ

ಸಿದ್ದರಾಮಯ್ಯನವರು ಉಡುಪಿಗೆ ಬಂದರೂ ಕೃಷ್ಣಮಠಕ್ಕೆ ಯಾಕೆ ಬರುವುದಿಲ್ಲ  ಪೇಜಾವರ ಶ್ರೀಗಳು ಹಲವಾರು ಬಾರಿ ಆಹ್ವಾನ ನೀಡಿದರೂ ಇಲ್ಲಿಗೆ ಬರುವುದಿಲ್ಲ ಅಂತಾರೆ ಯಾಕೆ ಇವರ ದುರಾಲೋಚನೆ ಯಾವುದು ಅಷ್ಠಮಠದವರು ಇವರಿಗೆ ಮಾಡಿದ ತಪ್ಪಾದರೂ ಏನು ಪೇಜಾವರ ಮಠಾಧೀಶರಿಗೆ ಎಲ್ಲ ಕಡೆ ಅಸಂಖ್ಯ ಭಕ್ತರಿದ್ದಾರೆ  ಅಂತಹ ಗೌರವದ ಸ್ವಾಮಿಯನ್ನು ಸಿದ್ದರಾಮಯ್ಯನವರು ಕಡೆಗಣಿಸಿದ್ದು ಯಾಕೆ ಇನ್ನಾದರೂ ಪೇಜಾವರ ಶ್ರೀಯ ಆಹ್ವಾನವನ್ನು ಸ್ವೀಕರಿಸಿ  ಕೃಷ್ಣನ ದರ್ಶನ ಮಾಡಿದರೆ ಮುಖ್ಯಮಂತ್ರಿಗೆ ಒಳ್ಳೆಯದು  ಈ ಬಗ್ಗೆ ಮುಖ್ಯಮಂತ್ರಿ ಯೋಚಿಸಲಿ

  • ಕೃಷ್ಣಾ  ಪುತ್ತೂರು