ಸೀಎಂ ಮೇಲೆ ಹುರುಳಿಲ್ಲದ ಆರೋಪ ಎಷ್ಟು ಸರಿ

ಸಿದ್ದರಾಮಯ್ಯ ಮುಖ್ಯಮಂತ್ರಿ ಪದವಿಗೆ ಏರಿದಾಗಿನಿಂದ ಕೆಲವರು ಹುರುಳಿಲ್ಲದ ವಿಷಯಗಳ ಬಗ್ಗೆ ಸುಮ್ಮನೆ ಹುಯಿಲೆಬ್ಬಿಸುತ್ತಿದ್ದು ಇದೀಗ ಪುರೋಹಿತಶಾಹಿ ಮತ್ತು ಹಿಂದೂ ಮೂಲಭೂತವಾದಿಗಳ ಸರದಿ ಶುರುವಾಗಿದೆ ಕೆಲ ದಿನದ ಹಿಂದೆ ಸೀಎಂ ಮಾಂಸಾಹಾರ ಸೇವಿಸಿ ದೇವಳ ಪ್ರವೇಶಿಸಿದ್ದು ಮಹಾಪರಾಧ ಎನ್ನುವುದು ಇವರ ಆಕ್ರೋಶ ದೇವರಿಗೆ ಮೈಲಿಗೆ ಆಗುವುದಾದರೆ ಇಂದಿಗೂ ಕೆಲ ದೇವಸ್ಥಾನಗಳಲ್ಲಿ ಬ್ರಾಹ್ಮಣರಿಗೆ ಮತ್ತೊಂದೆಡೆ ಭೋಜನ ವ್ಯವಸ್ಥೆ ಹಾಗೂ ಬ್ರಾಹ್ಮಣರೇತರರಿಗೆ ಒಂದೆಡೆ ಭೋಜನ ವ್ಯವಸ್ಥೆ ಏರ್ಪಡಿಸುವುದು ನ್ಯಾಯವೇ ದೇವರು ಇದನ್ನು ಒಪ್ಪುತ್ತಾರೆಯೇ ದೇವಳಗಳಲ್ಲಿ ಮೇಲು ಕೀಳೆಂಬ ಜಾತಿ ಬೇಧದ ಆಚರಣೆ ಮಾಡುವುದು ಸರಿಯೇ ಈ ವಿಚಾರಗಳ ಬಗ್ಗೆ ಹಿಂದೂ ಮೂಲಭೂತವಾದಿಗಳು ಪುರೋಹಿತಶಾಹಿಗಳು ಯಾಕೆ ಧ್ವನಿ ಎತ್ತುವುದಿಲ್ಲ ಅವೈಜ್ಞಾನಿಕ ವಿಚಾರಗಳನ್ನು ದೇವರ ಹೆಸರಿನಲ್ಲಿ ಬಿತ್ತರಿಸುವುದರಲ್ಲಿ ಸಮಾಜ ವಿಭಜಿಸುವುದರಲ್ಲಿ ಮಾತ್ರ ಇವರು ನಿಸ್ಸೀಮರೇ

  • ಸುಕೇಶ್ ಪೂಜಾರಿ  ಕುದ್ರೋಳಿ ಮಂಗಳೂರು