ಎತ್ತನಹೊಳೆ ಯೋಜನೆಯನ್ನು ವಿರೋಧಿಸುವ ಬಿಜೆಪಿ ಸಂಸದರು ಶಾಸಕರು ಅದಾನಿ ಪ್ರಾಯೋಜಿತ ಹಾರುಬೂದಿ ಸ್ಥಾವರವನ್ನು ಏಕೆ ಬೆಂಬಲಿಸುತ್ತಾರೆ

ಅವಿಭಜಿತ ದ ಕ ಜಿಲ್ಲೆ ಬಿಜೆಪಿ ಸಂಸದರು  ಶಾಸಕರು ಕಳೆದೊಂದು ವರ್ಷದಿಂದ ಎತ್ತಿನಹೊಳೆ ಯೋಜನೆಗೆ ತೀವ್ರ ಪ್ರತಿಭಟನೆ  ಹೋರಾಟ ಮಾಡುತ್ತಿದ್ದರೆ ಇತ್ತ ಪಡುಬಿದ್ರೆ ಬಳಿ ಎಲ್ಲೂರಿನಲ್ಲಿ ಈಗಾಗಲೇ ಸ್ಥಾಪಿಸಿರುವ ಅದಾನಿ ಒಡೆತನದ 1100 ಮೆಗಾವ್ಯಾಟ್ ಕಲ್ಲಿದ್ದಲು ಉಷ್ಣ ವಿದ್ಯುತ್ ಯೋಜನೆ ಈಗ ಪುನಃ 1600 ಮೆಗಾವ್ಯಾಟ್ ಹೆಚ್ಚಿಗೆ ಎರಡು ಘಟಕ ಸ್ಥಾಪಿಸಲು ಅನುಮತಿ ಮತ್ತು ಭೂಸ್ವಾಧೀನಕ್ಕೆ ಸ್ಥಳೀಯ ಜನರ ವಿರೋಧವಿದ್ದರೂ ಬಿಜೆಪಿ ನಾಯಕರುಗಳ ಬೆಂಬಲದಲ್ಲಿ ಬಲತ್ಕಾರವಾಗಿ ಸ್ಥಾಪಿಸಲು ಹೊರಟಿರುವುದು ಖೇದಕರ ಸಂಗತಿ
ಇದೇ ಬಿಜೆಪಿ ಪಕ್ಷದವರು ಮೊದಲು ಎನ್ಟಿಪಿಸಿಗೆ  ಕೊಜೆಂಟ್ರಿಕ್ಸಗೆ  ನಾಗಾರ್ಜುನ ಮತ್ತು ಲ್ಯಾಂಕೋ ಕಂಪೆನಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಇವರ ಒತ್ತಡ ಮತ್ತು ಹೋರಾಟದ ಫಲವಾಗಿ ಎನ್ ಟಿ ಪಿ ಸಿ  ಕೊಜೆಂಟ್ರಿಕ್ಸ್  ನಾಗಾರ್ಜುನ ಬರಲು ಸಾಧ್ಯವಾಗಿಲ್ಲ  ನಂತರದ ದಿನಗಳಲ್ಲಿ ಜೆಡಿಎಸ್ ಮತ್ತು ಬಿಜೆಪಿ ಸರಕಾರ ರಾಜ್ಯದಲ್ಲಿ ಬಂದ ಕಾರಣದಿಂದ ಶೋಭಾ ಕರಂದ್ಲಾಜೆ ಮತ್ತು ಈಶ್ವರಪ್ಪನವರು ವಿದ್ಯುತ್ ಖಾತೆ ಹೊಂದಿದ ಸಂದರ್ಭದಲ್ಲಿ ಬಹು ವ್ಯವಹಾರ ಏರ್ಪಟ್ಟು ಲ್ಯಾಂಕೋ ಕಂಪೆನಿ ಬಂದರೂ ಸ್ಥಳೀಯ ಜನರ ವಿರೋಧ ಇತ್ತು  ಆದರೆ ಈಗ ಅದಾನಿ ಲ್ಯಾಂಕೋ ಕಂಪೆನಿ ತೆಗೆದುಕೊಂಡ ನಂತರ ಪ್ರಧಾನಿ ನರೇಂದ್ರ ಮೋದಿಗೆ ಬಹು ಹತ್ತಿರದ ಉದ್ಯಮಿ ಮತ್ತು ಸ್ಥಳೀಯ ಬಿಜೆಪಿ ನಾಯಕರುಗಳನ್ನು ಖರೀದಿಸಿದ ಕಾರಣ ಎರಡೂ ಜಿಲ್ಲೆಯ ಬಿಜೆಪಿ ನಾಯಕರುಗಳು ಬಾಯಿ ಮುಚ್ಚಿ ಕುಳಿತು ಅದಾನಿ ಕಂಪೆನಿಗೆ ಬೆಂಬಲ ಸೂಚಿಸುತ್ತಿರುವುದು ಉಡುಪಿ ಮತ್ತು ದ ಕ ಜಿಲ್ಲೆಯ ಜನರು ತಲೆತಗ್ಗಿಸುವಂತಹ ವಿಷಯ
ಇದೇ ನಳಿನ್‍ಕುಮಾರ್ ಕಟೀಲರು ತನ್ನ ಕ್ಷೇತ್ರದಲ್ಲಿ ಕಲ್ಲಿದ್ದಲು ಆಧರಿತ ವಿದ್ಯುತ್ ಯೋಜನೆ ಬಾರದಂತೆ ಹೋರಾಟ ಮಾಡಿದವರು ಅದಾನಿ ಒಡೆತನದ ಕಲ್ಲಿದ್ದಲು ಆಧರಿತ ಹೆಚ್ಚಿನ 1600 ವಿದ್ಯುತ್ ಘಟಕ ಬರುವುದಕ್ಕೆ ಚಕಾರೆವೆತ್ತದೆ ಇರುವುದು ಅವರ ನಡೆತೆ ಬಗ್ಗೆ ಸಂಶಯ ಉಂಟುಮಾಡಿದೆ
ಇದೇ ಸಂಘ ಪರಿವಾರದ ಕಲ್ಲಡ್ಕ ಹೈ ಕಮಾಂಡ್ ಮತ್ತು ಪೇಜಾವರ ಸ್ವಾಮೀಜಿಯವರು ಅದಾನಿಯವರಿಂದ ಬಹುದೊಡ್ಡ ಗಂಟನ್ನು ಪಡೆದು ಬಾಯಿಗೆ ಬೀಗ ಹಾಕಿದ್ದಲ್ಲದೆ ಬಿಜೆಪಿಯವರು ಯಾರೂ ವಿರೋಧ ವ್ಯಕ್ತಪಡಿಸದಂತೆ ಕಟ್ಟಪ್ಪಣೆ ಮಾಡಿರುವುದು ಜನರಿಗೆ ಮಾಡಿದ ದ್ರೋಹವಲ್ಲವೇ   ಕಲ್ಲಿದ್ದಲು ಆಧಾರಿತ ವಿದ್ಯುತ್ ಯೋಜನೆಯಿಂದ ಏನೆಲ್ಲ ಪರಿಸರಕ್ಕೆ ತೊಂದರೆ ಇದೆ ಎಂದು ಬಿಂಬಿಸುತ್ತಿದ್ದ ಬಿಜೆಪಿ ನಾಯಕರುಗಳು ಅದಾನಿಯ ಮತ್ತು ಮೋದಿಯವರ ಹಣ ಬಲದಿಂದ ಸ್ಥಳೀಯ ಯೋಜನೆಯ ವಿರೋಧಿಗಳನ್ನು ಹೆದರಿಸಿ  ಬೆದರಿಸಿ ಬಾಯಿ ತೆರೆಯದಂತೆ ಮಾಡಿರುವುದು ಇತ್ತೀಚೆಗೆ ನಡೆದ ಪಬ್ಲಿಕ್ ಹಿಯರಿಂಗ್ ಸಭೆಯಿಂದ ಗೊತ್ತಾಗುತ್ತದೆ
ಸುಮಾರು 3000 ಬಾಡಿಗೆ ಗೂಂಡಾಗಳನ್ನು ಮತ್ತು ಉಡುಪಿ ಮತ್ತು ಮಂಗಳೂರಿನಿಂದ ಸ್ಥಳೀಯ ಬಿಜೆಪಿ ನಾಯಕರುಗಳು ಹಣ ಕೊಟ್ಟು ತರಿಸಿ ಜಿಲ್ಲಾಧಿಕಾರಿಗೆ ಭಾರೀ ಮೊತ್ತದ ಲಂಚ ಕೊಟ್ಟು  ಟಿಪ್ಪು ಜಯಂತಿಯ ಸಲುವಾಗಿ 144 ಸೆಕ್ಷನ್ ಜಾರಿ ಇರುವಾಗಲೇ ಸಭೆ ನಡೆಸಿ ಯೋಜನೆಗೆ ವಿರೋಧ ವ್ಯಕ್ತಪಡಿಸುವ ಪರಿಸರವಾದಿಗಳಿಗೆ ಮಾತಾಡದಂತೆ ಮಾಡಿರುವುದೇ ಇದಕ್ಕೆ ಸಾಕ್ಷಿ  ಇಂತಹ ಸಭೆಯಲ್ಲಿ ಬಿಜೆಪಿಯ ನಾಯಕರುಗಳ ಬೆಂಬಲದಿಂದ ಜಿಲ್ಲಾಧಿಕಾರಿಗಳು ಸಭೆ ನಡೆಸಿದರೂ ಸ್ಥಳೀಯ ಜನರು ರೊಚ್ಚಿಗೆದ್ದು ಸದ್ಯದಲ್ಲೇ ಬಿಜೆಪಿ ಮತ್ತು ಯೋಜನೆಯ ವಿರುದ್ಧ ದಂಗೆ ಏಳುವುದರಲ್ಲಿ ಸಂಶಯವಿಲ್ಲ

  • ಉಮೇಶ್ ಪೂಜಾರಿ
    ಉದ್ಯಾವರ  ಉಡುಪಿ