ಗ್ಯಾಸ್ ಸಿಲಿಂಡರ್ ತೂಕ ಯಾಕೆ ಮಾಡಿ ಕೊಡುತ್ತಿಲ್ಲ

ನಾಗರಿಕ ಪೂರೈಕೆ ಇಲಾಖೆಯವರೇ ಗಮನಿಸಿ  ಮನೆಗಳಿಗೆ ಸರಬರಾಜು ಮಾಡುವ ಗ್ಯಾಸ್ ಸಿಲಿಂಡರ್ ತೂಕ ಮಾಡಿ ಕೊಡಬೇಕೆಂದು ಸರಕಾರ ಎಲ್ಲ ಏಜನ್ಸಿಗಳಿಗೆ ತಿಳಿಸಿತ್ತು. ಇದು ಪುತ್ತೂರಿನಲ್ಲಿ ಯಾವ ಏಜೆನ್ಸಿಯಲ್ಲಿ ತೂಕವೇ ಇಲ್ಲ  ಕೇಳಿದರೆ ನಮ್ಮಲ್ಲಿ ಇಲ್ಲವೆಂದೂ ಹೇಳುತ್ತಾರೆ ಈ ಬಗ್ಗೆ ಇದೇ  ಸ್ಪಂದನ ದಲ್ಲಿ ಹಲವಾರು ಬಾರಿ ಬರೆದಿದ್ದೆ  ಆದ್ರೆ ಇಲ್ಲಿತನಕವೂ ಪ್ರಯೋಜನವಿಲ್ಲ  ಇಲ್ಲಿ ಕೆಲ ಸಿಲಿಂಡರುಗಳು ಬಹು ಬೇಗ ಮುಗಿಯುತ್ತದೆ  ಕೆಲವು ಸರಿಯಾಗಿವೆ  ಕಾರಣ ಗೊತ್ತಿಲ್ಲ  ಸಿಲಿಂಡರ್ ರೀಫಿಲ್ಲಿಂಗ್‍ನಲ್ಲಿ ಮೋಸ ಮಾಡುತ್ತಾರಾ ಇದಕ್ಕೆಲ್ಲ ಒಂದೇ ಪರಿಹಾರ ತೂಕ ಮಾಡಿ ಸಿಲಿಂಡರ್ ನೀಡಬೇಕು. ಇಲ್ಲದಿದ್ರೆ ಗ್ರಾಹಕರಿಗೆ ಮೋಸ ಮಾಡಿದ ಹಾಗೆ

  • ಎಸ್ ಎಂ ಪುತ್ತೂರು