ಸ್ಟೇಟ್‍ಬ್ಯಾಂಕ್ ಸರ್ವೀಸ್ ಬಸ್ ನಿಲ್ದಾಣ ಅವ್ಯವಸ್ಥೆಯನ್ನು ಸರಿಪಡಿಸುವವರ್ಯಾರು

ನಗರದ ಹೃದಯಭಾಗದಂತಿರುವ ಸ್ಟೇಟ್‍ಬ್ಯಾಂಕ್ ಬಳಿಯ ಸರ್ವೀಸ್ ಬಸ್ ನಿಲ್ದಾಣದ ದುರವಸ್ಥೆ ಹೇಳತೀರದು. ಬಸ್ ಸ್ಟ್ಯಾಂಡ್ ಒಳಗಡೆ ಎಲ್ಲೆಡೆಯಲ್ಲಿಯೂ ಹೊಂಡ-ಗುಂಡಿಗಳೇ. ಬಸ್ ಸ್ಟ್ಯಾಂಡಿನ ಮೇಲುಚಾವಣಿ ಬಿರುಸಿನ ಗಾಳಿಗೆ ಹಾರಿ ಹೋಗಿ ಕೆಲವೆಡೆ ತಗಡಲ್ಲದೆ ಎಲ್ಲ ಖಾಲಿ ಖಾಲಿ ಆಗಿವೆ. ಮಳೆಗಾಲದಲ್ಲಿ ಬಸ್ಸಿಗೆ ಕಾಯುವವರಿಗೆ ಆಸರೆ ಇಲ್ಲ. ಇನ್ನು ಮುಂದಿನ ಮಳೆಗಾಲದಲ್ಲಿ ಪ್ರಯಾಣಿಕರಿಗೆ ಏನೆಲ್ಲ ಸಂಕಷ್ಟಗಳು ಕಾದಿವೆಯೋ ಏನೋ
ಇಲ್ಲಿನ ಸಮಸ್ಯೆಗಳು ಒಂದೆರಡಲ್ಲ. ಬಸ್ ನಿಲ್ದಾಣದಲ್ಲಿ ಆಚೆ ಈಚೆ ಹೋಗುವವರು ಮೂಗು ಮುಚ್ಚಿಯೇ ನಡೆದಾಡಬೇಕು. ಪಕ್ಕದಲ್ಲಿ ಶೌಚಾಲಯ ಇದ್ದರೂ ಸಹ ಅದು ಸ್ವಚ್ಛ ಇಲ್ಲದ ಕಾರಣ ಜನರೆಲ್ಲ ಪಕ್ಕದಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಾರೆ. ರಸ್ತೆ ಬದಿಯಲ್ಲಿ ಅಲ್ಲಲ್ಲಿ ಕಂಡ ಕಂಡಲ್ಲಿ ಮೂತ್ರ ವಿಸರ್ಜನೆ ಮಾಡಿದರೆ ದಂಡ ವಿಧಿಸುವ ನಿಯಮಗಳೆಲ್ಲಾ ಬಂದರೂ ಅವುಗಳು ಪರಿಪಾಲನೆ ಆಗದಿದ್ದರೆ ಏನು ಪ್ರಯೋಜನ   ಮನಪಾ ಕೂಡಲೇ ಬಸ್ ನಿಲ್ದಾಣದ ದುರವಸ್ಥೆಗಳನ್ನು ಸರಿಪಡಿಸಬೇಕು. ಸ್ಮಾರ್ಟ್ ಸಿಟಿ ಎಂದು ಬರೀ ಮಾತಾಡಿದರಾಯಿತೇ  ಈ ಬಗ್ಗೆ ಕಾಳಜಿ ವಹಿಸತಕ್ಕದ್ದು

  • ಜೆ ಎಫ್ ಡಿ’ಸೋಜ  ಅತ್ತಾವರ ಮಂಗಳೂರು