ಪೊಲೀಸರೇ ಪಶುಗಳಂತೆ ವರ್ತಿಸಿದರೆ ಜನಸಾಮಾನ್ಯರನ್ನು ರಕ್ಷಿಸುವವರ್ಯಾರು

ಸಮಾಜದಲ್ಲಿ ಪೊಲೀಸ್ ವ್ಯವಸ್ಥೆಯ ಮೇಲೆ ಅಪಾರ ಗೌರವ ಇದೆ. ಆದರೆ ಬೇಲಿಯೇ ಹೊಲ ಮೇಯ್ದಂತೆ ಈ ವ್ಯವಸ್ಥೆಯೇ ಸಮಾಜವನ್ನು ಶೋಷಿಸುವ ಕೆಲಸ ಮಾಡುತ್ತಿವೆ  ಇದಕ್ಕೆ ಉದಾಹರಣೆ ತುಮಕೂರಿನಲ್ಲಿ ನಡೆದ ಮಾನಸಿಕ ಅಸ್ವಸ್ಥೆಯ ಮೇಲಿನ ಅತ್ಯಾಚಾರ ಘಟನೆ  ಪೊಲೀಸ್ ಅಧಿಕಾರಿಗಳೇ ಹೀಗೆ ಪಶುಗಳಂತೆ ನಡೆದುಕೊಂಡರೆ ಜನಸಾಮಾನ್ಯರನ್ನು ರಕ್ಷಿಸುವವರು ಯಾರು  ಹೀಗಾದರೆ ಪೊಲೀಸ್ ವ್ಯವಸ್ಥೆಯನ್ನು ನಂಬಲು ಹೇಗೆ ಸಾಧ್ಯ  ಇಂತಹ ಪೈಶಾಚಿಕ ಕೃತ್ಯವೆಸಗಿದ ಅಧಿಕಾರಿಯ ವಿರುದ್ಧ ಸಂಬಂಧಿಸಿದವರು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ

  • ಎಂ ಮನೋಹರ ಕೋಟ್ಯಾನ್
    ಕಂಕನಾಡಿ ಮಂಗಳೂರು