ಬಾಹುಬಲಿ-2 ಗಳಿಕೆ ದಾಖಲೆ ಜನಸಾಮಾನ್ಯರಿಗೇನು ಲಾಭ

ಇತ್ತೀಚೆಗೆ ಬಾಹುಬಲಿ ಚಿತ್ರ ಸಾವಿರ ಕೋಟಿಯಷ್ಟು ಹಣಗಳಿಸಿ ದಾಖಲೆ ನಿರ್ಮಿಸಿದೆ. ಇದನ್ನು ಮಾಧ್ಯಮಗಳು ಬಹು ಸಂಭ್ರಮದಿಂದ ಬಣ್ಣಿಸುತ್ತಿವೆ. ಆದರೆ ಇದರಿಂದ ಜನ ಸಾಮಾನ್ಯರು ಗಳಿಸಿದ್ದೇನು  ತುರ್ತು ಅನ್ನಕ್ಕಾಗಿ ತನ್ನ ಒಡಲ ಕುಡಿಯನ್ನೇ ಮಾರುವಂತಹ ತಾಯಂದಿರು ಈ ದೇಶದಲ್ಲಿ ಇರುವಾಗ ನಿತ್ಯ ಹಸಿವಿನಿಂದ ನರಳುತ್ತಿರುವ ಅತೀ ಬಡಮಕ್ಕಳು ಇಲ್ಲಿ ಉಸಿರಾಡುತ್ತಿರುವಾಗ ಹೊರೆಯನ್ನು ತಾಳಲಾರದೇ ರೈತರು ಆತ್ಮಹತ್ಯೆ ದಾರಿ ಹಿಡಿಯುತ್ತಿರುವಾಗ ಸಾವಿರ ಕೋಟಿ ರೂಪಾಯಿ ಯಾರದೋ ಪಾಲಾಗುತ್ತದೆ

  • ಕೆ ಶ್ರೀಕಾಂತ್   ಬಜಗೋಳಿ ಕಾರ್ಕಳ