ಇಬ್ಬರಲ್ಲಿ ಸತ್ಯವಂತರು ಯಾರು

ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಸುಬ್ರತಾ ರಾಯ್ ಒಡೆತನದ ಸಹರಾ ಸಂಸ್ಥೆಯಿಂದ 40 ಕೋಟಿ, ಬಿರ್ಲಾ ಕಂಪೆನಿಯಿಂದ 12 ಕೋಟಿ ರೂಪಾಯಿ ಲಂಚ ಸ್ವೀಕರಿಸಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆಪಾದಿಸಿದ್ದಾರೆ
ಇದಕ್ಕೆ ಪ್ರತಿಯಾಗಿ ಬಿಜೆಪಿ ಆಗಸ್ಟಾ ವೆಸ್ಟ್‍ಲ್ಯಾಂಡ್ ಹಗರಣದಲ್ಲಿ ಕಾಂಗ್ರೆಸ್ ಮತ್ತು ಸೋನಿಯಾ ಕುಟುಂಬ ಸಿಲುಕಿದೆ ಎಂದು ಆಪಾದಿಸಿರುವುದಲ್ಲದೆ  ನರೇಂದ್ರ ಮೋದಿಯವರು ಗಂಗೆಯಷ್ಟೆ ಪವಿತ್ರ ಎಂದು ತಿರುಗೇಟು ನೀಡಿದೆ
ಹಾಗಾದರೆ ಇಬ್ಬರಲ್ಲಿ ಯಾರು ಸತ್ಯವಂತರು   ಎಲ್ಲರೂ ತಾವು ಮಾತ್ರ ಸತ್ಯ ಹರಿಶ್ಚಂದ್ರರು  ಉಳಿದವರು ಭ್ರಷ್ಟರು ಎಂಬಂತೆ ವಾಗ್ದಾಳಿ ನಡೆಸುತ್ತಾರೆ  ಅದಕ್ಕೆ ಪೂರಕವಾಗಿ ತಮ್ಮ ಬಳಿ ದಾಖಲೆ ಇದ್ದು  ಅದನ್ನು ಸಮಯ ಬಂದಾಗ ಬಹಿರಂಗಪಡಿಸುವುದಾಗಿಯೂ ಹೇಳುತ್ತಾರೆ  ಆದರೆ ಒಂದು ಆರೋಪವನ್ನೂ ರುಜುವಾತು ಮಾಡುವುದಿಲ್ಲ  ದಾಖಲೆಗಳನ್ನು ಬಹಿರಂಗಪಡಿಸುವುದಿಲ್ಲ  ಇವರುಗಳೆಲ್ಲ ಜನರನ್ನು ಮೋಸಗೊಳಿಸುತ್ತಿದ್ದಾರೆ
ಕೇವಲ ಅಧಿಕಾರದ ಆಸೆಗೆ ಸಲ್ಲದ ಮಾತುಗಳನ್ನಾಡುವ ಇಂತಹ ರಾಜಕಾರಣಿಗಳಿಂದ ದೇಶಕ್ಕೆ ಏನೂ ಒಳಿತಾಗುವುದಿಲ್ಲ. ಪ್ರತಿಯೊಬ್ಬರು ಒಂದಲ್ಲ ಒಂದು ರೀತಿ ಭ್ರಷ್ಟರಾಗಿದ್ದಾರೆ  ಬಡವರಿಗೆ  ದಲಿತರಿಗೆ  ರೈತರಿಗೆ ಒಳ್ಳೆಯದು ಮಾಡಬೇಕೆನ್ನುವ ಕಿಂಚಿತ್ ಕಾಳಜಿ ಇವರುಗಳಿಗೆ ಇಲ್ಲ
ಬಹುಮುಖ ಬೆಲೆಯ ನೋಟುಗಳನ್ನು ರದ್ದು ಮಾಡಿ ನರೇಂದ್ರ ಮೋದಿ ದೊಡ್ಡ ಪ್ರಮಾದ ಎಸಗಿದ್ದಾರೆ  ನೋಟು ನಿಷೇಧವಾಗಿ ತಿಂಗಳು ಉರುಳಿದರೂ ಜನಸಾಮಾನ್ಯರ ಕಷ್ಟ ಕೊನೆಯಾಗುವ ಲಕ್ಷಣ ಕಾಣುತ್ತಿಲ್ಲ

  • ಜೈನ್‍ದ್ದೀನ್  ಫರಂಗಿಪೇಟೆ