ಮರಳು ಮಾಫಿಯಾಗೆ ಯಾರು ಕಾರಣ

ಹಿಂದೆ ಬಿಹಾರದಲ್ಲಿ ನಡೆಯುತ್ತಿದ್ದ ಮಾಫಿಯಾ ಡಾನ್ ಮಾದರಿಯ ಕುಕೃತ್ಯಗಳು ಇಂದು ಕರಾವಳಿಯಲ್ಲಿ ನಡೆಯುತ್ತಿರುವುದು ವಿಷಾದನೀಯ. ಪೊಲೀಸ್ ಇಲಾಖೆ ಸಹಕಾರದೊಂದಿಗೆ ಕಾರ್ಯಾಚರಿಸುತ್ತಿರುವ ಕಳ್ಳ ಸಾಗಾಣಿಕೆದಾರರು ಪ್ರಾಮಾಣಿಕ ಅಧಿಕಾರಿಗಳಿಗೆ ಬೆದರಿಕಯೊಡ್ಡಿ – ಅದೂ ಮಹಿಳಾ ಜಿಲ್ಲಾಧಿಕಾರಿಯವರ ಮೇಲೆಯೇ ಹಲ್ಲೆ ನಡೆಸುವಷ್ಟರ ಮಟ್ಟಿಗೆ – ಮುಂದುವರಿದಿರುವುದು ಅಪಾಯದ ಕರೆ ಗಂಟೆಯಾಗಿದೆ. ಮಾಮೂಲಿ ಪಡೆದು ಇವರಿಗೆ ಕುಮ್ಮಕ್ಕು ನೀಡುತ್ತಿರುವ ಪೊಲೀಸ್ ಅಧಿಕಾರಿಗಳ ಸಹಿತ ಮಾಫಿಯಾ ಡಾನ್‍ಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಸುಸಂಸ್ಕøತ ಜಿಲ್ಲೆಯಲ್ಲಿ ಇಂತಹ ಕೃತ್ಯಗಳು ಮುಂದುವರಿಯದಂತೆ ಕಡಿವಾಣ ಹಾಕುವುದು ಅಗತ್ಯ. ಮಾತ್ರವಲ್ಲದೆ ಸರಕಾರ ಸ್ಪಷ್ಟವಾದ ಮರಳು ನೀತಿಯನ್ನು ರೂಪಿಸಿ ಸ್ಥಳೀಯರಿಗೆ ಅಗತ್ಯ ಮರಳು ಪೂರೈಕೆಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿಯಿಂದ ದೀರ್ಘ ಸಮಯದಿಂದ ನುಣಿಚಿಕೊಳ್ಳುತ್ತಿರುವುದೇ ಇಂದಿನ ಮರಳು ಕಾಳಸಂತೆಗೆ ಭ್ರಷ್ಟಚಾರಕ್ಕೆ ಕಾರಣ

  • ಐಕಳ ಬಾವ ಚಿತ್ತರಂಜನ್ ಶೆಟ್ಟಿ