ಮಂಗಳೂರಿನ ಚಿತ್ರಮಂದಿರಗಳೆಲ್ಲಿ

ಹಿಂದಿನ ಒಂದು ಕಾಲದಲ್ಲಿ ವಿಜೃಂಭಿಸುತ್ತಿದ್ದ ಮಂಗಳೂರಿನಲ್ಲಿ 10 ಚಿತ್ರಮಂದಿರಗಳಿದ್ದು, ಚಿತ್ರರಸಿಕರಿಗೆ ಮನರಂಜನೆ ನೀಡುತ್ತಿದ್ದವು. ಬೈಂದೂರಿನಿಂದ ಹಿಡಿದು ಮಡಿಕೇರಿಯವರು ಇಲ್ಲಿಗೆ ಬಂದು ಚಿತ್ರ ವೀಕ್ಷಿಸುತ್ತಿದ್ದರು. ಇಲ್ಲಿನ ಚಿತ್ರಮಂದಿರ ಅಷ್ಟು ಜನಪ್ರಿಯವಾಗಿತ್ತು. ಈಗ ಪ್ಲಾಟೀನಂ, ಅಮೃತ್, ನ್ಯೂಚಿತ್ರಾ, ಪ್ರಭಾತ್ ಇಲ್ಲವೇ ಇಲ್ಲ. ಇನ್ನು ಉಳಿದ 5 ಚಿತ್ರಮಂದಿರಗಳೂ ಮೀನಮೇಷ ಎಣಿಸುತ್ತಿವೆ. ಇಲ್ಲಿ ತುಳು ಚಿತ್ರಗಳಿಗೆ ಸರಿಯಾಗಿ ಚಿತ್ರಮಂದಿರವೇ ಇಲ್ಲ ಸರಿಯಾಗಿ ಕನ್ನಡ ಚಿತ್ರಗಳೂ ಪ್ರದರ್ಶನವಾಗುತ್ತಿಲ್ಲ ಇನ್ನು ಉಳಿದ 5 ಚಿತ್ರಮಂದಿರಗಳೂ ಹೋದರೆ ದೇವರೇ ಗತಿ ಮಂಗಳೂರಿನವರೇ ಗಮನಿಸಿ

  • ಕೇಶವ  ಪುತ್ತೂರು