ಪಾಕ್ ವಿರುದ್ಧ ಭಾರತದ ಯುದ್ಧದಲ್ಲಿ ಚೀನಾ ಯಾರ ಪರ ವಹಿಸಬಹುದು ?

  • ವರುಣ್ ಕಪೂರ್

ಚೀನಾ ಮತ್ತು ಪಾಕಿಸ್ತಾನದ ನಡುವೆ ನ್ಯಾಟೋದಂತಹ ಒಡಂಬಡಿಕೆ ಇಲ್ಲ. ಪಾಕಿಸ್ತಾನವನ್ನು ರಕ್ಷಿಸಲು ಚೀನಾ ಎಂದಿಗೂ ಭಾರತದ ಮೇಲೆ ಯುದ್ಧ ಸಾರಿಲ್ಲ. ಚೀನಾ ಹಠಾತ್ ದಾಳಿ ನಡೆಸಲು ಭಾರತ ಟಿಬೆಟ್‍ನಂತೆ ಸಣ್ಣ ದೇಶವಲ್ಲ. ಮತ್ತೊಂದು ದೇಶದ ಸ್ನೇಹಕ್ಕಾಗಿ 120 ಕೋಟಿ ಜನಸಂಖ್ಯೆಯ ದೇಶದ ವಿರುದ್ಧ ಚೀನಾ ಯುದ್ಧ ಮಾಡಲು ಬಯಸುವುದಿಲ್ಲ.

1962ರಲ್ಲಿದ್ದಂತೆ ಭಾರತೀಯ ಸೇನೆ ದುರ್ಬಲವಾಗಿಲ್ಲ. ಪಾಕಿಸ್ತಾನದ ಜನತೆ ಚೀನಾದ ಜನತೆಯೊಡನೆ ಯಾವುದೇ ರೀತಿಯ ಭಾವನಾತ್ಮಕ ಸಂಬಂಧ ಹೊಂದಿಲ್ಲ. ಹಾಗಾಗಿ ಚೀನಾದ ಜನತೆ ಯುದ್ಧ ಬೆಂಬಲಿಸುವುದಿಲ್ಲ. ಚೀನಾ ಭಾರತದ ಮೇಲೆ ದಾಳಿ ನಡೆಸಿದರೆ ಇತರ ದೇಶಗಳು ಸುಮ್ಮನೆ ಇರುವುದಿಲ್ಲ. ಎರಡನೆ ಮಹಾಯುದ್ಧದ ನಂತರ ಎರಡು ಪ್ರಬಲ ರಾಷ್ಟ್ರಗಳು ಪರಸ್ಪರ ನೇರ ಸಮರದಲ್ಲಿ ತೊಡಗಿಲ್ಲ.  ಭಾರತದ ದೊಡ್ಡ ನಗರಗಳಿಗಿಂತಲೂ ಚೀನಾದ ಯಾವುದೇ ಬೃಹತ್ ನಗರಗಳು ಗಡಿ ಪ್ರದೇಶಕ್ಕೆ ಹತ್ತಿರವಾಗಿಲ್ಲ. ಮೇಲಾಗಿ ಚೀನಾ ಪರಮಾಣು ಅಸ್ತ್ರ ಹೊಂದಿರುವ ದೇಶದೊಡನೆ ಯುದ್ಧ ಬಯಸುವುದಿಲ್ಲ.

ಈ ಹಿನ್ನೆಲೆಯಲ್ಲಿ ಕೆಲವು ಅಂಕಿ ಅಂಶಗಳನ್ನು ಪರಿಶೀಲಿಸಬಹುದು. ಚೀನಾದ ಒಟ್ಟು ರಫ್ತು ವ್ಯಾಪಾರದ ಶೇ 2.3ರಷ್ಟು ಅಂದರೆ 58.4 ಶತಕೋಟಿ ಡಾಲರ್ ಭಾರತಕ್ಕೆ ಬರುತ್ತದೆ. ಭಾರತದ ಒಟ್ಟು ಆಮದು ಪ್ರಮಾಣದಲ್ಲಿ ಶೇ 12.6ರಷ್ಟು ಚೀನಾದ ಸರಕುಗಳಿರುತ್ತವೆ. ಚೀನಾ ಭಾರತದಿಂದ 16.4 ಶತಕೋಟಿ ಡಾಲರ್ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ. ಚೀನಾದ ಆಮದು ವಹಿವಾಟಿನಲ್ಲಿ ಶೇ 0.8 ಭಾರತದ ಪಾಲಿದೆ. ಭಾರತದ ಒಟ್ಟು ರಫ್ತು ವ್ಯಾಪಾರದ ಶೇ 4.2ರಷ್ಟು ಚೀನಾಗೆ ಸಲ್ಲುತ್ತದೆ.

ಚೀನಾ ಭಾರತಕ್ಕೆ 8.1 ಶತಕೋಟಿ ಡಾಲರ್ ಅಂದರೆ ಶೇ 0.3ರಷ್ಟು ಸರಕು  ಪಾಕಿಸ್ತಾನಕ್ಕೆ ರಫ್ತು ಮಾಡುತ್ತದೆ. ಪಾಕಿಸ್ತಾನದ ಆಮದು ಪ್ರಮಾಣದಲ್ಲಿ ಇದು ಶೇ 12ರಷ್ಟಾಗುತ್ತದೆ. ಪಾಕಿಸ್ತಾನದಿಂದ ಚೀನಾ 1.9 ಶತಕೋಟಿ ಡಾಲರ್ ಅಂದರೆ ತನ್ನ ಆಮದು ವ್ಯಾಪಾರದ ಶೇ 0.1ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಪಾಕಿಸ್ತಾನದ ಒಟ್ಟು ರಫ್ತು ವ್ಯಾಪಾರದಲ್ಲಿ ಶೇ 11ರಷ್ಟು ಚೀನಾಗೆ ಸಲ್ಲುತ್ತದೆ.

ಚೀನಾ ಪಾಕಿಸ್ತಾನ ಆರ್ಥಿಕ ಒಡಂಬಡಿಕೆಯ ಅನುಸಾರ 46 ಶತಕೋಟಿ ಬಂಡವಾಳ ಹೂಡಿಕೆ 15 ವರ್ಷಗಳ ಕಾಲಾವಧಿಯನ್ನು ವ್ಯಾಪಿಸುತ್ತದೆ. ಆದರೆ ಭಾರತದೊಡನೆ ವರ್ಷಕ್ಕೆ 75 ಶತಕೋಟಿ ಡಾಲರ್ ವಹಿವಾಟನ್ನು ಚೀನಾ ಕಳೆದುಕೊಳ್ಳಲು ಇಚ್ಚಿಸುವುದಿಲ್ಲ. ಪಾಕಿಸ್ತಾನದೊಡಗಿನ 10 ಶತಕೋಟಿ ಡಾಲರ್ ಮೌಲ್ಯದ ವಹಿವಾಟು ರಕ್ಷಿಸಲು ಚೀನಾ ಭಾರತದ ಮಾರುಕಟ್ಟೆಯನ್ನು ಕಳೆದುಕೊಳ್ಳುವುದಿಲ್ಲ.

ಪಾಕಿಸ್ತಾನದೊಂದಿಗೆ ಚೀನಾದ ಸಿಪಿಇಸಿ ಒಡಂಬಡಿಕೆ ಕೇವಲ ಒಂದು ಪರ್ಯಾಯ ಮಾರ್ಗವಾಗಿದ್ದು ಯೂರೋಪ್ ಮತ್ತು ಮಧ್ಯಪ್ರಾಚ್ಯ ದೇಶಗಳೊಡನೆ ಸಂಪರ್ಕ ಸಾಧಿಸಲು ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತದೆ. ಭಾರತವು ಚೀನಾವನ್ನು ನಿರ್ಲಕ್ಷಿಸಿ ಪಾಕಿಸ್ತಾನದ ಮೇಲೆ ಗಮನ ಹರಿಸುವುದು ಸೂಕ್ತ ಎನಿಸುತ್ತದೆ.

ಭಾರತದೊಡನೆ ತನ್ನ ಸಂಬಂಧ ಕೆಟ್ಟುಹೋದರೆ ಪಾಕಿಸ್ತಾನ ಸಿಪಿಇಸಿ ಒಡಂಬಡಿಕೆಯ ಬಗ್ಗೆ ಚಿಂತೆ ಮಾಡಬೇಕಾಗುತ್ತದೆ. ಮೋದಿ ಸರ್ಕಾರ ಈ ನಿಟ್ಟಿನಲ್ಲೇ ಕಾರ್ಯಪ್ರವೃತ್ತವಾಗಿದೆ. ಗಿಲ್ಗಿಟ್ ಮತ್ತು ಬಲೂಚಿಸ್ಥಾನ ವಿವಾದಗಳು ಈ ಹಿನ್ನೆಲೆಯಲ್ಲೇ ಸೃಷ್ಟಿಯಾಗಿವೆ. ಚೀನಾ ಈ ಅಸ್ಥಿರತೆಯನ್ನು ಗ್ರಹಿಸಿದ ಕೂಡಲೇ ತನ್ನ ವ್ಯಾಪಾರಿ ಮಾರ್ಗವನ್ನು ತೊರೆದು ರಕ್ಷಣಾತ್ಮಕ ಮಾರ್ಗಗಳಿಗೆ ಮೊರೆಹೋಗುತ್ತದೆ.