ಯಾವ ಪ್ರಧಾನಿ ಇಂಥ ದಿಟ್ಟ ಹೆಜ್ಜೆಯಿಟ್ಟಿದ್ದಾರೆ

ನೋಟು ನಿಷೇಧವು ಉದ್ದೇಶಿತ ಫಲಿತಾಂಶ ನೀಡಿಲ್ಲ. ಭ್ರಷ್ಟ ಹಣವೆಲ್ಲವೂ ಬ್ಯಾಂಕಿಗೆ ಹರಿದು ಬಂದಿಲ್ಲ ಎಂಬುದಾಗಿ ಮೋದಿ ವಿರೋಧಿಗಳು ಪ್ರಚಾರ ಮಾಡುತ್ತಿದ್ದಾರೆ. ಒಂದು ಕ್ಷಣಕ್ಕೆ ಅವರ ಮಾತುಗಳನ್ನೇ ಒಪ್ಪಿಕೊಳ್ಳೋಣ. ಎಲ್ಲ ಪ್ರಯತ್ನಗಳು ನಿರೀಕ್ಷಿತ ಫಲ ನೀಡುವುದಿಲ್ಲವೆಂಬುದನ್ನೇ ಒಪ್ಪಿಕೊಳ್ಳೋಣ. ಆದರೆ ಕಾಳಧನವನ್ನು ಹತ್ತಿಕ್ಕಲು ಮೋದಿಯವರು ಪ್ರಾಮಾಣಿಕ ಪ್ರಯತ್ನವನ್ನಾದರೂ ಮಾಡಿದ್ದಾರೆ ಎಂಬುದನ್ನು ನಿರಾಕರಿಸಲಾದೀತೆ ? ಬೇರೆ ಯಾವ ಪ್ರಧಾನಿ ತಾನೆ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟಿದ್ದಾರೆ ? ಯಾವುದೇ ಒಂದು ಪ್ರಯತ್ನ ವಿಫಲಗೊಳ್ಳಲು ಹಲವು ಕಾರಣಗಳಿರುತ್ತವೆ. ಮೋದಿ ವಿರೋಧಿಗಳು ಟೀಕಿಸುವಂತೆ ನೋಟು ಅಮಾನ್ಯೀಕರಣವು ವಿಫಲಗೊಂಡಿದೆ ಎಂದಾದರೆ ಅದಕ್ಕೆ ಮೋದಿಯಂತೂ ಕಾರಣರಲ್ಲ. ವ್ಯವಸ್ಥೆಯಲ್ಲಿ ತುಂಬಿಕೊಂಡಿರುವ ಒಂದಿಷ್ಟು ಭ್ರಷ್ಟರೇ ಅದಕ್ಕೆ ಕಾರಣಕರ್ತರು. ನೋಟು ಅಮಾನ್ಯೀಕರಣದ ಉದ್ದೇಶವು ಪೂರ್ಣ ಈಡೇರದಂತೆ ಮಾಡುವಲ್ಲಿ ಅವರ ಪ್ರಯತ್ನವೂ ಇದೆ. ಆದರೆ ಮೋದಿ ವಿರೋಧಿಗಳು ಏನೇ ಹೇಳಲಿ, ಜನಸಾಮಾನ್ಯರಂತೂ ಮೋದಿಯವರ ಕ್ರಮವನ್ನು ಮೆಚ್ಚಿಕೊಂಡಿದ್ದಾರೆನ್ನುವುದು ನಿರ್ವಿವಾದ.

  • ಪರಮೇಶ್ವರ ಮಂಗಳೂರು