ಸುರಕ್ಷತೆಯ ಮಾತೆಲ್ಲಿ ಬಂತು

ಮಾನಸಿಕ ಅಸ್ವಸ್ಥೆ ಮೇಲೆ ಎಎಸ್‍ಐ ಅತ್ಯಾಚಾರ ಎಸಗಿದ್ದಾರೆನ್ನಲಾದ ಪೈಶಾಚಿಕ ಕೃತ್ಯ ನಾಗರಿಕ ಸಮಾಜ ತಲೆ ತಗ್ಗಿಸುವಂಥದ್ದು. ಅದರಲ್ಲೂ ಯಾರು ಸಮಾಜದಲ್ಲಿ ರಕ್ಷಣ ನೀಡಬೇಕೋ ಅವರೇ ಇಂಥ ರಾಕ್ಷಸಿ ಕೃತ್ಯ ಎಸಗಿದರೆ ಇನ್ನು ಸುರಕ್ಷತೆಯ ಮಾತೆಲ್ಲಿ ಬಂತು ? ಈ ಆಘಾತಕಾರಿ ಘಟನೆಯಿಂದ ಒಂಟಿ ಮಹಿಳೆಯರಿಗೆ, ಅದರಲ್ಲೂ ಮಾನಸಿಕ ಅಸ್ವಸ್ಥ ಮಹಿಳೆಯರಿಗೆ ಹೊರಗೆ ಸುರಕ್ಷಿತ ವಾತಾವರಣ ಇಲ್ಲ ಎಂಬುದು ಸ್ಪಷ್ಟ.
ಪೊಲೀಸ್ ಇಲಾಖೆಯಲ್ಲಿ ಇಂಥ ಕೀಳು ಮಟ್ಟದ ಕಾಮುಕರು ಇರುವುದು ಕಳವಳಕಾರಿ ಸಂಗತಿ. ಇಂದು ಅತ್ಯಾಚಾರ, ಲೈಂಗಿಕ ಕಿರುಕುಳ ಸಾಮಾನ್ಯ ಸಂಗತಿ ಎನಿಸಿಬಿಟ್ಟಿದ್ದು, ಕಠಿಣ ಶಿಕ್ಷೆಯಾಗಿದ್ದು ಕಡಿಮೆ. ಇನ್ನು, ಇಂಥ ಪ್ರಕರಣಗಳಲ್ಲಿ ಪ್ರಭಾವಿಗಳಿದ್ದರಂತೂ ಅವರು ಸಂಪೂರ್ಣ ಸುರಕ್ಷಿತ. ಹಾಗಾಗಿ ಅಂಥ ನಿರ್ಲಕ್ಷಿತ ಪ್ರಕರಣಗಳ ಗುಂಪಿಗೆ ಈ ಘಟನೆಯೂ ಸೇರದಿರಲಿ. ಕಠಿಣ ಶಿಕ್ಷೆ ಆಗಲಿ

  • ಟಿ ಕೆ ಅವಿನಾಶ್  ಮಂಗಳೂರು