ಪುತ್ತೂರು ನಿಲ್ದಾಣದಲ್ಲಿ ರೈಲುಗಳೆಲ್ಲಿ

ಸಾಂದರ್ಭಿಕ ಚಿತ್ರ

ಪುತ್ತೂರು ರೈಲು ನಿಲ್ದಾಣವೇನೋ  ಆದರ್ಶ ವಾಯಿತು  ಚೂರೂ ಕಸವಿಲ್ಲದೆ ಬಹಳ ಚೆನ್ನಾಗಿದೆ  ಆದರೆ ಸಮಯಕ್ಕೆ ಸರಿಯಾಗಿ ರೈಲುಗಳು ಸಂಚರಿಸುತ್ತಿಲ್ಲ  ಬೆಂಗಳೂರಿಗೆ ಹಗಲು ಒಂದು  ರಾತ್ರಿ ಒಂದು  ಮತ್ತೊಂದು ಲೋಕಲ್ ರೈಲು ಮಾತ್ರ ಈ ಆದರ್ಶ ನಿಲ್ದಾಣದ ಭಾಗ್ಯ  ಶ್ರವಣ ಬೆಳಗೋಳ  ಮೀರಜ್ ಎಕ್ಸ್‍ಪ್ರೆಸ್  ಮಂಗಳೂರು  ಹಾಸನ ಹಾಗೂ ಇನ್ನೂ ಕೆಲವು ರೈಲುಗಳು ಎಲ್ಲಿ ಹಳಿ ತಪ್ಪಿದೆ   ಇದು ಕೇವಲ ಗೂಡ್ಸ್ ಸಾಗಾಟಕ್ಕೆ ಇರುವ ರೈಲು ಮಾರ್ಗವೇ   ಸರಿಯಾಗಿ ರೈಲು ಇದ್ದರೆ  ಈ ಮಾರ್ಗವು ಬಹಳ ಲಾಭದಾಯಕ  ಇದಕ್ಕೆ ಇಲ್ಲಿನ ಸಂಸದರು ಮನಸ್ಸು ಮಾಡಬೇಕಾಗಿದೆ  ಹಾಗೇನೇ ಇಲ್ಲಿ ಒಂದು ಎಟಿಎಂ ಅತೀ ಅಗತ್ಯ

  • ಹನುಮಂತ ರಾವ್  ಪುತ್ತೂರು