ಸಬ್ ರಿಜಿಸ್ಟ್ರಾರ್ ಆಫೀಸು ಸ್ಥಳಾಂತರ ಯಾವಾಗ

ಸದಾ ಸುದ್ದಿಯಲ್ಲಿದ್ದ ಪುತ್ತೂರಿನ ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಮಿನಿ ವಿಧಾನಸೌಧಕ್ಕೆ ಸ್ಥಳಾಂತರ ಮಾಡುತ್ತಾರೆ ಎಂದು ಶಾಸಕಿ, ಆಗಿನ ಡೀಸಿಯವರು ಹೇಳಿದ ಮಾತು ಇನ್ನೂ ಸುಳ್ಳಾಗಿದೆ. ಈಗ ಇರುವ ಸಬ್ ರಿಜಿಸ್ಟ್ರಾರ್ ಕಚೇರಿ ಇನ್ನೂ ಕೊಂಪೆಯಾಗಿ ಉಳಿದಿದೆ. ಇಲ್ಲಿ ಸರಿಯಾಗಿ ಶೌಚಾಲಯ ಇಲ್ಲ. ಶೌಚಾಲಯದಲ್ಲಿ ಹಳೇ ಸಾಮಾನಿನ ಗೋಡೌನ್ ಆಗಿದೆ. ಹಲವಾರು ಸಲ ಪತ್ರಿಕೆಯಲ್ಲಿ ವರದಿ ಬಂದ್ರೂ ಸರಕಾರ ಇನ್ನೂ ಕುರುಡಾಗಿದೆ  ಬೇರೆ ತಾಲೂಕಿನ ಮಿನಿ ವಿಧಾನಸೌಧದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ಕೆಲಸ ನಿರ್ವಹಿಸುತ್ತಿದ್ದರೂ ಪುತ್ತೂರಿನಲ್ಲಿ ಮಾತ್ರ ಹೀಗೇಕೆ ಎಂದು ಹಲವಾರು ಮಂದಿ ಕೇಳುವ ಪ್ರಶ್ನೆ  ಹಾಗೂ ಮಿನಿ ವಿಧಾನಸೌಧದಲ್ಲಿ ನಿರ್ಮಿಸುತ್ತಿರುವ ಲಿಫ್ಟ್ ಇನ್ನೂ ನಿಧಾನಗತಿಯಲ್ಲಿದೆ. ಏಕೆ

  • ಮುರಾರಿ ಪುತ್ತೂರು