ಸಬ್ ರಿಜಿಸ್ಟ್ರಾರ್ ಆಫೀಸು ಸ್ಥಳಾಂತರ ಯಾವಾಗ

ಸ್ಥಳಾವಕಾಶವಿಲ್ಲದೆ ಒದ್ದಾಡುತ್ತಿರುವ ಪುತ್ತೂರಿನ ಸಬ್ ರಿಜಿಸ್ಟ್ರಾರ್ ಮಿನಿ ವಿಧಾನಸೌಧಕ್ಕೆ ಇನ್ನು ಸ್ಥಳಾಂತರವಾಗಿಲ್ಲ ಏಕೆ ಇಷ್ಟರವರಗೆ ಮಿನಿ ವಿಧಾನಸೌಧದಲ್ಲಿ ಲಿಫ್ಟ್ ಇಲ್ಲವೆಂದು ಕಾರಣ ನೀಡಲಾಗುತ್ತಿತ್ತು ಈಗ ಸುಸಜ್ಜಿತ ಲಿಫ್ಟ್ ಆರಂಭವಾಗಿದೆ ಇದರ ಬಗ್ಗೆ ಇನ್ನೂ ಶಾಸಕರು ಮೌನವಾಗಿರುವುದೇಕೆ ಎಲ್ಲ ಕಡೆ ಮಿನಿ ವಿಧಾನಸೌಧದಲ್ಲಿ ಸಬ್ ರಿಜಿಸ್ಟ್ರಾರ್ ಆಫೀಸ್ ಇರುವಾಗ ಇಲ್ಲಿ ಮಾತ್ರ ಸ್ಥಳಾಂತರ ಯಾಕಿಲ್ಲ ಮಿನಿ ವಿಧಾನಸೌಧದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ಇರಲೇಬೇಕು ಇದರಿಂದ ಸಾರ್ವಜನಿಕರಿಗೆ ಬಹಳ ಉಪಕಾರವಾಗುವುದು ಇನ್ನಾದರೂ ಶಾಸಕಿಯವರು ಕೂಡಲೇ ಮಿನಿವಿಧಾನಸೌಧಕ್ಕೆ ಸ್ಥಳಾಂತರಿಸಲಿ

  • ಸುಧಾಮ  ಪುತ್ತೂರು