ಕಾಳಧನವನ್ನು ಪ್ರಧಾನಿ ಬಡವರಿಗೆ ಹಂಚುವುದೆಂದು ?

ಇಂದಿರಾಗಾಂಧಿಯವರು ಅಷ್ಟೇನೂ ಪ್ರಭಾವಿ ನಾಯಕಿ ಆಗಿರಲಿಲ್ಲ  ಆದರೆ ದೇಶದ ಕಾಲಮಾನದಲ್ಲಿ ಯಾವುದೆಲ್ಲ ನಡೆಯಬೇಕೊ ಅದಕ್ಕೆ ತನ್ನಿಂದ ತಾನಾಗಿಯೇ ಕಾಲ ಕೂಡಿ ಬಂದಾಗ ಯಾರೂ ಏನೂ ಆಗುತ್ತಾರೆ   1969ರಲ್ಲಿ ಒಂದು ದಿನ ಹೀಗೆಲ್ಲಾ ಆಗಬಹುದು ಅಂತ ಆಗ ಯಾರೂ ಭಾವಿಸಿರಲಿಲ್ಲ  ಇಂದಿರಾಗಾಂಧಿಯವರು ಆಗಿನ ತನ್ನ ಪಕ್ಷದ ಮುತ್ಸದ್ಧಿಗಳನ್ನೆಲ್ಲ ನೂಕಿ ಮೂಲೆಗುಂಪು ಮಾಡಿ ತನ್ನದೇ ಹೊಸ ಪಕ್ಷ ಎಂಬುದಾಗಿ ಘೋಷಿಸಿದರು  ತಾನು ಬಡವರಿಗಾಗಿ ಇರುವವಳು ಎಂದು ಹೇಳಿಕೊಂಡರು  ಬ್ಯಾಂಕುಗಳನ್ನು ಸಾರ್ವಜನಿಕ ರಂಗಕ್ಕೆ ಬರುವಂತೆ ಮಾಡಿದರು  ಇದರಿಂದಾಗಿ ಧನಿಕರ ಹಣ ಬಡವರಿಗೆ ಸಿಗಲಿದೆ ಎಂಬುದಾಗಿ ಬಿಂಬಿಸಲಾಗಿತ್ತು  ಈ ಭಾವನೆಯನ್ನು ಉಳಿಸಲು ಮುಂದೆ ಶೇಕಡ 4 ದರದಲ್ಲಿ ಸಾಲ ನೀಡಿ ಮತ್ತೂ ಮುಂದೆ ಹೋಗಿ ಅದನ್ನು ವಸೂಲು ಮಾಡುವುದು ಬೇಡ ಎಂದಾಯಿತು  1971ರಲ್ಲಿ ಏಕಾಏಕಿ ಯುದ್ಧ ಸಾರಿ ಪಾಕಿಸ್ತಾನವನ್ನು ಹೋಳು ಮಾಡಿದರು  ಆ ವರ್ಷ ಅವರಿಗೆ ಸಂಸತ್ತಿನಲ್ಲಿ ಸಂಪೂರ್ಣ ಬಹುಮತ ಪ್ರಾಪ್ತವಾಗಿತ್ತು. ಅವರ ಆರಂಭದ ಮಂತ್ರಿ ಮಂಡಲದಲ್ಲಿ ಘಟಾನುಘಟಿಗಳು ಮಂತ್ರಿಗಳಾಗಿದ್ದರು  ಹೀಗೆ ತಮ್ಮ ಇಚ್ಛೆಯಂತೆ ನಡೆಯಲು ಅಡ್ಡಿ ಇಲ್ಲದೆ ನಿರಂಕುಶವಾಗಿ ವರ್ತಿಸುತ್ತಾ ಇದ್ದವರಿಗೆ  ನ್ಯಾಯಾಲಯದ ತೀರ್ಮಾನದಿಂದಾಗಿ ಅಧಿಕಾರಕ್ಕೆ ಕುತ್ತು ಬಂದಾಗ ಹಿಂದೆ ಮುಂದೆ ಅಲೋಚಿಸದೆ ತುರ್ತು ಪರಿಸ್ಥಿತಿಯನ್ನೂ ಜ್ಯಾರಿ ಮಾಡಿ ಅಧಿಕಾರಿದಲ್ಲಿ ಮನಬಂದಂತೆ ನಡೆದರು  ತನ್ನ ಸುತ್ತ ಇದ್ದ ಅಧಿಕಾರದಾಹಿ ಹೊಗಳು ಭಟರಿಗೆ ಅನುಕೂಲ ಕಲ್ಪಿಸಿಕೊಟ್ಟರು. ಎಲ್ಲವನ್ನೂ ಬಡವರ ಹೆಸರಿನಲ್ಲಿ ಮಾಡಲಾಗಿತ್ತು. ಆದರೆ ತಾವು ಹೇಗೆ ಮರುಳಾದೆವು ಎಂದು ಬಡವರಿಗೆ ಮುಂದೆ ಗೊತ್ತಾದಾಗ 1977ರಲ್ಲಿ ಸೋತು ಹೋದರು. ಹಿಂದೆ 1969ರಿಂದ 1977ರವರೆಗೆ ನಮ್ಮ ದೇಶದ ಚರಿತ್ರೆಯಲ್ಲಿ ಆತನಕ ಅಷ್ಟೇನೂ ಪ್ರಭಾವಿಯಾಗಿಲ್ಲದಿದ್ದ ವ್ಯಕ್ತಿಯೊಬ್ಬರು ಅಧಿಕಾರ ಚಲಾಯಿಸಲು ಕಾಲವೇ ಅವಕಾಶ ಮಾಡಿಕೊಟ್ಟಿತು
2014ರಿಂದ ಅದೇ ಕಾಲದ ಪುನರಾವರ್ತನೆ ಆಗುತ್ತಿದೆಯೋ ಎಂಬಂತೆ ಇತ್ತೀಚೆಗಿನ ಘಟನೆಗಳು ಸೂಚಿಸುತ್ತದೆ. ಈಗಿನವರು ತಮ್ಮ ಪಕ್ಷದ ಮುತ್ಸದ್ಧಿಗಳನ್ನು ತಳ್ಳುವುದರ ಬದಲಿಗೆ ಕರೆದು ಬದಿಯಲ್ಲಿ ಕುಳ್ಳಿರಿಸಿದರು  ತಾನು ಎಲ್ಲವನ್ನೂ ಈ ದೇಶದ ಬಡವರಿಗಾಗಿಯೇ ಮಾಡುತ್ತಾ ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದೇನೆ ಅನ್ನುತ್ತಾರೆ  ಸಾಮಾನ್ಯ ಚಲಾವಣೆಯಲ್ಲಿದ್ದ ನೋಟುಗಳನ್ನು ಹೆಚ್ಚು ಮೌಲ್ಯದವುಗಳು ಎಂಬ ಹಣೆಪಟ್ಟಿ ಮಾಡಿ ಏಕಾಏಕಿ ಹಿಂಪಡೆದು ಕಾಳಧನವನ್ನು ಸಂಗ್ರಹಿಸಿ ಬಡವರಿಗೆ ಹಂಚುವುದಾಗಿ ಭಾಷಣ ಮಾಡುತ್ತಾರೆ  ಸಂಪೂರ್ಣ ಬಹುಮತ ಇರುವುದರಿಂದ ತಮಗೆ ಯಾವುದೂ ಅಡ್ಡಿ ಇಲ್ಲ ಎಂಬಂತೆ ನಡೆಯುತ್ತಾರೆ  ಈಗಿನ ಪ್ರಧಾನಿಗೆ ಇಂದಿರಾ ಗಾಂಧಿಯವರಿಗೆ ಸಿಕ್ಕಂತೆ ಘಟಾನುಘಟಿಗಳು ಮಂತ್ರಿಗಳಾಗಿ ದೊರಕದಿದ್ದರೂ  ತಮಗೆ ಬೇಕಾದ ಗುಜರಾತಿ ಅಧಿಕಾರಿಗಳನ್ನು ಎಲ್ಲಾ ಮುಖ್ಯ ಹುದ್ದೆಗಳಲ್ಲಿ ನೇಮಿಸಿಕೊಂಡಿದ್ದಾರೆ  ಸಿವಿಲ್ ಸರ್ವೀಸ್ ಇದರ ನಿಯಮಗಳನ್ನು ಪಾಲಿಸಲಿಲ್ಲ ಎಂಬುದಾಗಿ ಯಾವನೇ ಅಧಿಕಾರಿ ದೂರಲು ಧೈರ್ಯವಿಲ್ಲದೆ ಸುಮನ್ನಿದ್ದಾರೆ  ಕಾಳಧನ ತಡೆಯುವುದು  ಭ್ರಷ್ಟಾಚಾರ ನಿರ್ಮೂಲನೆ  ಬಡವರ ಉದ್ಧಾರ ಇತ್ಯಾದಿ ಘೋಷಣೆಟಗಳನ್ನು ತೋರಿಕೆಗೆ ಮಾಡುವುದರಿಂದಾಗಿ ಯಾರೂ ಏನೂ ಹೇಳುವಂತಿಲ್ಲ. ಇದು ಆರಂಭ  ಇನ್ನೂ ಮುಂದೆ ಮುಂದಿದೆ ಆಟ ಎಂಬ ತಮ್ಮ ಧಮಕಿಯಿಂದ ತಮ್ಮಲ್ಲಿ ಯಾರಾದರೂ ಅಪಸ್ವರದವರು ಇದ್ದಾರೆ ಅವರೂ ಸುಮ್ಮನಿರಲು ಸಾಕು. ಹೀಗೆ ಹಿಂದಿನಂತೆ ಎಂಟು ವರ್ಷಗಳ ಕಾಲ ಇನ್ನೂ ಏನೇನೋ ನಮ್ಮ ದೇಶದಲ್ಲಿ ಆಗಲಿದೆ
ಇದೆಲ್ಲ ಕಾಲದ್ದೇ ಮಹಿಮೆ ಮತ್ತು ಅದಕ್ಕಾಗಿಯೇ ಹಿಂದಿನವರು ಕಾಲವೇ ಇದೋ ನಿನಗೆ ನಮಸ್ಕಾರ ಎಂದರು

  • ನಾರಾಯಣ ರಾವ್, ಮಣ್ಣಗುಡ್ಡೆ ಮಂಗಳೂರು