ಕೂಳೂರಿಗೆ ಮೀನು ಮಾರ್ಕೇಟ್ ಭಾಗ್ಯವೆಂದು ?

ಕೂಳೂರು ಪೇಟೆಯಲ್ಲಿ ಮೀನು ಮಾರಲು ಸೂಕ್ತ ಮಾರ್ಕೇಟ್ ಇಲ್ಲದೆ ರಸ್ತ ಬದಿ ಕುಳಿತು, ಇಲ್ಲವೇ ಬಸ್ ಸ್ಟ್ಯಾಂಡೋ, ಫ್ಲೈಓವರ್ ಬಳಿಯೋ ಕುಳಿತು ಮೀನು ಮಾರುವ ಪರಿಸ್ಥಿತಿ ಬಂದಿದೆ. ಒಟ್ಟಿನಲ್ಲಿ ಮಳೆಗಾಲದಲ್ಲಿ ಮಳೆ ನೀರಿನಲ್ಲಿ ನೆನೆದುಕೊಂಡೇ ಮೀನು ಮಾರಬೇಕಾದರೆ, ಬೇಸಿಗೆಯಲ್ಲಿ ವಿಪರೀತ ಸುಡುಬಿಸಿಲು ಮತ್ತು ಧೂಳಿನಿಂದ ಮೀನು ಮಾರುವ ಹೆಂಗಸರ ಪರಿಸ್ಥಿತಿ ನೋಡಿದರೆ ಅಯ್ಯೋ ಎಣಿಸದಿರದು. ಆದರೆ ಪಾಲಿಕೆ ವ್ಯಾಪ್ತಿಯ ಜನರಿಂದ ಆಯ್ಕೆಗೊಂಡ ಕಾರ್ಪೊರೇಟರುಗಳಿಗೆ ಕೂಳೂರಿನಲ್ಲಿ ಒಂದು ಸುಸಜ್ಜಿತವಾದ ಮೀನು ಮಾರ್ಕೆಟ್ ಆಗಬೇಕೆಂಬ ಇಚ್ಛಾಶಕ್ತಿ ಯಾಕಿಲ್ಲ ಎಂಬುದು ತಿಳಿಯದಾಗಿದೆ.

ಶಾಸಕ ಬಾವಾ ಅಂದು ಚುನಾವಣೆ ಸಂದರ್ಭ ಆಶ್ವಾಸನೆ ಕೊಟ್ಟು ಹೋದವರು ಇಲ್ಲಿತನಕ ಕೂಳೂರಲ್ಲಿ ನಯಾಪೈಸೆ ಕೆಲಸ ಮಾಡಿಲ್ಲ. ಬರೇ ಉದ್ಘಾಟನೆ ಮಾಡುವುದೇ ಇವರ ಸಾಧನೆ ಎಂಬಂತಾಗಿದೆ. ಒಟ್ಟಿನಲ್ಲಿ ಇಂಥ ದಡ್ಡ ಜನಪ್ರತಿನಿಧಿಗಳನ್ನು ಆರಿಸಿ ಕಳುಹಿಸಿದ ಮತದಾರರು ತಾವು ಮಾಡಿದ ತಪ್ಪಿಗೆ ಪರಿತಪಿಸುವಂತಾಗಿದೆ. ಇಷ್ಟರತನಕ ಸುಮ್ಮನಿದ್ದು, ಇನ್ನುಳಿದ ಅವಧಿಯಲ್ಲಾದರೂ ಶಾಸಕ ಮೊೈದಿನ್ ಬಾವಾ ಕೂಳೂರು ಪೇಟೆಯಲ್ಲಿ ಒಂದು ಸುಸಜ್ಜಿತವಾದ ಮೀನಿನ ಮಾರ್ಕೇಟ್ಟಿಗೆ ಕೂಡಲೇ ಕಾರ್ಯಪ್ರವೃತ್ತರಾಗಬೇಕಿದೆ.

  • ಕೆ ಅನಿಲ್ ಸುವರ್ಣ, ಕೂಳೂರು